ಲಕ್ಷೆ್ಮೕಶ್ವರ: ಕಾಂಗ್ರೆಸ್ ಪಕ್ಷದ ಜನಪರ ಆಡಳಿತ ಮೆಚ್ಚಿ ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನತೆ ಪಕ್ಷದ ಗೆಲುವಿಗೆ ಮತ ನೀಡಿದ್ದಾರೆ ಎಂದು ಲಕ್ಷೆ್ಮೕಶ್ವರ ನಗರ ಘಟಕದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರೀಶ ತೆಂಬದಮನಿ ಹೇಳಿದರು.
ಪಟ್ಟಣದ ಶಿಗ್ಲಿ ಕ್ರಾಸ್ನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಶನಿವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ವಿರೋಧ ಪಕ್ಷದವರು ಕಾಂಗ್ರೆಸ್ ಮೇಲೆ ವಿನಾಕಾರಣ ಆರೋಪ ಮಾಡಿ ಪ್ರಚಾರ ಮಾಡಿದರೂ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜತೆಗೆ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ ಎಂದರು.
ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿ ಕಾಂಗ್ರೆಸ್ ಪರ ಘೊಷಣೆ ಕೂಗಿದರು. ಪದ್ಮರಾಜ ಪಾಟೀಲ, ಸೋಮಣ್ಣ ಬೆಟಗೇರಿ, ಬಸವರಾಜ ಓದುನವರ, ನೀಲಪ್ಪ ಶರಸೂರಿ, ಯಲಪ್ಪ ಸೂರಣಗಿ, ಬಾಬಣ್ಣ ಅಳವಂಡಿ, ನಾಗರಾಜ ದೊಡ್ಡಮನಿ, ಇಸ್ಮಾಯಿಲ್ ಆಡೂರ, ನೀಲಪ್ಪ ಪಡಗೇರಿ, ಕಿರಣ ನವಲೆ, ಪ್ರಕಾಶ ಕೊಂಚಿಗೇರಿಮಠ, ಅಣ್ಣಪ್ಪ ರಾಮಗೇರಿ, ಶಿದ್ದಲಿಂಗಯ್ಯ ಪಶುಪತಿಮಠ, ಅಪ್ಜಲ್ ರಿತ್ತಿ, ಮಂಜಪ್ಪ ಶರಸೂರಿ, ಸೋಮಣ್ಣ ಲಮಾಣಿ, ನಂದೀಶ ಚಕ್ರಸಾಲಿ, ಹನುಮಂತ ಶರಸೂರಿ, ಎಂ.ಎಂ ಗಾಡಗೊಳಿ, ರಿಯಾಜ ಡಾಲಾಯತ್ ಸೇರಿ ಕಾಂಗ್ರೆಸ್ ಕಾರ್ಯಕರ್ತರಿದ್ದರು.