ಇಳಕಲ್ಲದ 195ನೇ ಮತಗಟ್ಟೆಯಲ್ಲಿ ಹುನಗುಂದ ವಿಧಾನಸಭೆ ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೋಟುರ ಮಾತನಾಡಿದರು. ತಹಸೀಲ್ದಾರ್ ಸತೀಶ್ ಕೂಡಲಗಿ, ಹುನಗುಂದ ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಪೌರಾಯುಕ್ತ ರಾಜಾರಾಮ ಪವಾರ ಇತರರಿದ್ದರು. 
ಜಿಲ್ಲೆ

ನಿರ್ಭೀತಿಯಿಂದ ಮತದಾನ ಮಾಡಿ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ(ಗ್ರಾ): ಮತದಾರರು ನಿರ್ಭೀತಿಯಿಂದ ಮತದಾನ ಮಾಡಬೇಕೆಂದು ಹುನಗುಂದ ವಿಧಾನಸಭೆ ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೋಟುರ ಹೇಳಿದರು.

ಇಲ್ಲಿನ ಅಲಂಪುರಪೇಟೆಯ 195ನೇ ಮತಗಟ್ಟೆಗೆ ತಾಲೂಕು ಆಡಳಿತ ಅಧಿಕಾರಿಗಳೊಂದಿಗೆ ಸಾರ್ವಜನಿಕರನ್ನು ಭೇಟಿ ಮಾಡಿ ಅವರು ಮಾತನಾಡಿದರು.
ಇಲ್ಲಿನ ಮತಗಟ್ಟೆ ಅತಿ ಸೂಕ್ಷ್ಮವಾಗಿದ್ದು, ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಅಧಿಕಾರಿಗಳ ತಂಡ ಸಿದ್ಧವಾಗಿದೆ.

ತಹಸೀಲ್ದಾರ್ ಸತೀಶ್ ಕೂಡಲಗಿ, ಹುನಗುಂದ ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಪೌರಾಯುಕ್ತ ರಾಜಾರಾಮ ಪವಾರ, ಸಿಪಿಐ ಸುನೀಲ ಸವದಿ, ಪಿಎಸ್‌ಐ ಸೋಮೇಶ ಗೆಜ್ಜಿ, ಕಂದಾಯ ಇಲಾಖೆ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.