ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಅವರು ಶುಕ್ರವಾರ ಸಭೆ ನಡೆಸಿ ಮತಯಾಚಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು, ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಬಿಜೆಪಿಯ ಭ್ರಷ್ಟ ಆಡಳಿತಕ್ಕೆ ಜನ ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದರು.
ವಿರಭದ್ರಯ್ಯ ಹಿರೆಪಟ್ಟ, ಸೋಮಯ್ಯ ಚಿಕ್ಕಪಟ್ಟ, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಜಿಪಂ ಮಾಜಿ ಸದಸ್ಯರಾದ ಬಾಬು ಸಾಹುಕಾರ ಮೇತ್ರಿ, ಗುರಣ್ಣಗೌಡ ಪಾಟೀಲ, ಮಹಾದೇವ ಗಡ್ಡದ, ತಾಪಂ ಮಾಜಿ ಸದಸ್ಯ ಜೀತಪ್ಪ ಕಲ್ಯಾಣಿ, ಶಿವಯೋಗೆಪ್ಪ ನೇದಲಗಿ, ದುಂಡಪ್ಪ ಹ್ಯಾಳದ, ಗಡ್ಡೆಪ್ಪಗೌಡ ಜೋತಗೊಂಡ, ಜೆಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಧರ್ಮರಾಜ ವಾಲಿಕಾರ, ಮಂಜುನಾಥ ಕಾಮಗೊಂಡ, ರುದ್ರೇಶ ಅಲಗೊಂಡ, ಕಲ್ಲಪ್ಪ ಗುಡಮಿ, ಸತೀಶ ಕುಂಬಾರ, ಬಾಬು ಗುಡಮಿ ಇತರರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ನೂರಾರು ಯುವಕರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಯಾದರು.