ಬಾದಾಮಿ ಮತಕ್ಷೇತ್ರದ ಹಂಸನೂರು, ಕುಟುಕನಕೇರಿ ಗ್ರಾಮಗಳಲ್ಲಿ ಕಾಂಗ್ರೆಸ್ ಪರ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮತಯಾಚನೆ ಮಾಡಿ ಮಾತನಾಡಿದರು.ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಸಂಜು ಬರಗುಂಡಿ, ಎಪಿಎಂಸಿ ಮಾಜಿ ಸದಸ್ಯ ಪ್ರಕಾಶ ಮೇಟಿ ಇದ್ದರು. 
ಜಿಲ್ಲೆ

ಜನಪರ ಆಡಳಿತಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ

ದತ್ತಾತ್ರೇಯ ಪಿ ಕುಲಕರ್ಣಿ

ಬಾದಾಮಿ: ಬಡವರು, ದೀನದಲಿತರು, ಸಮಾಜದಲ್ಲಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರಿಗೆ ಮತ ನೀಡಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮನವಿ ಮಾಡಿದರು.

ಬಾದಾಮಿ ಮತಕ್ಷೇತ್ರದ ಹಂಸನೂರು, ಕುಟುಕನಕೇರಿ ಗ್ರಾಮದಲ್ಲಿ ಲೋಕಸಭಾ ಅಭ್ಯರ್ಥಿ ಸಂಯುಕ್ತ ಪರ ಮತಯಾಚನೆ ಮಾಡಿ ಮಾತನಾಡಿದರು. ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಸಂಜು ಬರಗುಂಡಿ, ಎಪಿಎಂಸಿ ಮಾಜಿ ಸದಸ್ಯ ಪ್ರಕಾಶ ಮೇಟಿ, ಗ್ರಾಮದ ಪ್ರಮುಖಂಡರಾದ ಭೀಮಪ್ಪ ಕೋರಿ, ಹಾಸನಸಾಬ್ ಬಾಬಾನ್, ಭೀಮಪ್ಪ ಮನೆನರ, ಫಕೀರಪ್ಪ ಗಡೆದ ಇದ್ದರು.