ಲಕ್ಕುಂಡಿಯಲ್ಲಿ ಗ್ರಾಮ ಪಂಚಾಯತ ಸ್ವಿಫ್ ಸಮೀತಿಯು ಮತದಾನ ಜಾಗೃತಿ ಜಾಥಾ ನಡೆಸಿತು. 
ಜಿಲ್ಲೆ

ಲಕ್ಕುಂಡಿಯಲ್ಲಿ ಮತದಾನ ಜಾಗೃತಿ ಜಾಥಾ

ಲಕ್ಕುಂಡಿ: ಇಲ್ಲಿಯ ಗ್ರಾಮ ಪಂಚಾಯತ ಸ್ವೀಪ್ ಸಮಿತಿಯು ಲೋಕಸಭಾ ಚುನಾವಣಿಯ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಗ್ರಾಮೀಣಾಭಿವೃದ್ದಿ ಪಂಚಾಯತ್‌ರಾಜ್ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಆಶ್ರಯದಲ್ಲಿ ನಡೆದ ಮತದಾನ ಜಾಗೃತಿ ಜಾಥ ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆಯಿತು. ಗ್ರಾಮ ಪಂಚಾಯತ ಅಧಿಕಾರಿಗಳು, ಶಿಕ್ಷಕರು, ಗ್ರಾ. ಪಂ ಸಿಬ್ಬಂದಿ ವರ್ಗ ಜಾಗೃತಿ ಮೂಡಿಸಿತು. ಮತದಾನ ನಮ್ಮ ಹಕ್ಕು, ಮತವನ್ನು ಕಡ್ಡಾಯವಾಗಿ ಮಾಡಬೇಕು. ಮತದಾನ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣಿಗಳನ್ನು ಕೂಗಿದರು. ಪ್ರಮುಖ ಸ್ಥಳದಲ್ಲಿ ನರೆದಿದ್ದ ಮತದಾರರಿಗೆ ಮತದಾನ ಮಾಡುವ ಬಗ್ಗೆ ತಿಳುವಳಿಕೆ ನೀಡಿದರು. ಇದಕ್ಕೂ ಪೂರ್ವ ಗ್ರಾಮ ಪಂಚಾಯತ ಮುಂದೆ ಚುನಾವಣಿ ಜಾಗೃತಿಯ ಸ್ವಿಪ್ ಧ್ವಜಾರೋಹಣವನ್ನು ಶಿಕ್ಷಕಿ ಅಂಜನಾ ಕರಿಯಲ್ಲಪ್ಪನವರ ನೆರವೇರಿಸಿದರು. ನಂತರ ಪ್ರತಿಜ್ಞಾ ವಿಧಿ ಭೋಧಿಸಲಾಯಿತು ಅಭಿವೃದ್ಧಿ ಅಧಿಕಾರಿ ರಾಜಕುಮಾರ ಭಜಂತ್ರಿ, ಕಾರ್ಯದರ್ಶಿ ತುಕಾರಾಮ ಹುಲಗಣ್ಣವರ, ಗ್ರಂಥಾಲಯ ಮೇಲ್ವಿಚಾರಕ ಅಶೋಕ ಮುಸ್ಕಿನಭಾವಿ ಪ್ರಾಥಮಿಕ ಶಾಲೆಯ ಶಿಕ್ಷಕರು ಸೇರಿದಂತೆ ಸಿಬ್ಬಂದಿ ಹಾಜರಿದ್ದರು.