ಜಿಲ್ಲೆ

ರಂಗೋಲಿ ಮೂಲಕ ಮತ ಜಾಗೃತಿ

ಸದೇಶ್ ಕಾರ್ಮಾಡ್

ಮೈಸೂರು: ಕುವೆಂಪುನಗರದ ಇ ಮತ್ತು ಎಫ್ ಬ್ಲಾಕ್‌ನ ಚಿತ್ರಭಾನು ರಸ್ತೆಯ ನಿವಾಸಿ ಸುಧಾ ಪ್ರಸಾದ್ ಶುಕ್ರವಾರ ರಂಗೋಲಿ ಮೂಲಕ ಮತದಾನ ಜಾಗೃತಿ ಮೂಡಿಸಿದರು. ಮನೆಯ ಮುಂದೆ ರಂಗೋಲಿ ಬಿಡಿಸಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಿದರು.

ಸ್ವಚ್ಛತಾ ವಾಹನದಲ್ಲಿ ಮತ ಜಾಗೃತಿ

ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ವಾಹನಗಳಲ್ಲಿ ಶುಕ್ರವಾರ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು. ತ್ಯಾಜ್ಯ ಸಂಗ್ರಹಿಸುವ ವಾಹನದ ಮೈಕ್‌ನಲ್ಲಿ ಪ್ರತಿನಿತ್ಯ ‘ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸಿ ನೀಡಿ’ ಎಂದು ಪ್ರಚಾರ ಮಾಡಲಾಗುತ್ತದೆ. ಆದರೆ, ಶುಕ್ರವಾರ ಇದೇ ಮೈಕ್ ಬಳಕೆ ಮಾಡಿಕೊಂಡು ಎಲ್ಲರು ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಿಕೊಳ್ಳಲಾಯಿತು.

ಮತದಾನ ವಂಚಿತರಾದ ನಿವೃತ್ತ ಶಿಕ್ಷಕ

ನಂಜುಮಳಿಗೆಯ ನಿವೃತ್ತ ಶಿಕ್ಷಕ ಮಹದೇವಸ್ವಾಮಿ ಅವರು ಈ ಬಾರಿ ಮತದಾನದಿಂದ ವಂಚಿತರಾದರು. ಇವರು ಕಳೆದ ವಿಧಾನಸಭಾ ಸಭೆಯಲ್ಲಿ ಮತದಾನ ಮಾಡಿದ್ದರು. ಇವರ ಪತ್ನಿ ಹೆಸರು ಮತದಾರರ ಪಟ್ಟಿಯಲ್ಲಿದ್ದು, ಇವರ ಹೆಸರನ್ನು ಕೈಬಿಡಲಾಗಿದೆ.