ಗಂಗಾವತಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾಗಿದ್ದು, ಅರ್ಹ ಅಭ್ಯರ್ಥಿಗೆ ಹಕ್ಕು ಚಲಾಯಿಸಿ ಎಂದು ಡಿಸಿ ಸುಂದರೇಶಬಾಬು ಹೇಳಿದರು.
ನಗರದ ಬಾಲಕರ ಪಪೂ ಕಾಲೇಜು ಮೈದಾನದಲ್ಲಿ ತಾಲೂಕು ಸ್ವೀಪ್ ಸಮಿತಿ ಶುಕ್ರವಾರ ಆಯೋಜಿಸಿದ್ದ ಬೃಹತ್ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. ಯಾರೂ ಮತದಾನದಿಂದ ದೂರ ಉಳಿಯಬಾರದು. ಶೇ.100 ಮತದಾನವಾದಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಹತ್ವ ಬರಲಿದೆ. ಸಮರ್ಥ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಇದನ್ನೂ ಓದಿ: ಕಡ್ಡಾಯವಾಗಿ ಮತದಾನ ಮಾಡಿ
ನಗರದ ಪ್ರಮುಖ ವೃತ್ತಗಳ ಸಾಗಿದ ವಾಕಥಾನ್‌ನಲ್ಲಿ ವಿವಿಧ ಇಲಾಖೆ ಸಿಬ್ಬಂದಿ ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಲೆಕ್ಕಪತ್ರ ವೀಕ್ಷಕ ವೆಂಕಟೇಶ ಬಾಬು, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ತಾಲೂಕು ಚುನಾವಣಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಮಹಾಂತಗೌಡ ಪಾಟೀಲ್, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಎಇಇ ಚೇತನ ನಾಯ್ಕ, ಬಿಇಒ ಸೋಮಶೇಖರಗೌಡ ತಿಪ್ಪನಾಳ್, ಜಿಪಂ ಎಇಇ ಪಲ್ಲವಿ ಗುನ್ನಾಳ್, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ನಗರ ಪಿಐ ಅಡವಿಪ್ಪ ಎನ್.ಗುದಿಗೊಪ್ಪ, ಪಿಡಬ್ಲುೃಡಿ ಎಇಇ ಸುದೇಶಕುಮಾರ ಇತರರಿದ್ದರು.