ಜಿಲ್ಲೆ

ಹೊಸಹಟ್ಟಿಯಲ್ಲಿ ವಾಂತಿ-ಭೇದಿ

Davangere - Desk - Mahesh Babu E

ಚಿತ್ರದುರ್ಗ: ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೊಸಹಟ್ಟಿ ಗ್ರಾಮದಲ್ಲಿ ಈಚೆಗೆ ನಾಲ್ವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವರದಿ ಆಧರಿಸಿ ಟಿಎಚ್‌ಒ ಡಾ.ಬಿ.ವಿ.ಗಿರೀಶ್ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ಗ್ರಾಮದಲ್ಲಿ ನಡೆಯಿತು.

ಮೆದು ಆಹಾರ ಸೇವಿಸಿ, ಕಾಯಿಸಿ ಆರಿಸಿದ ನೀರನ್ನು ಸೇವಿಸಿ, ಬಯಲಲ್ಲಿ ಮಲ ವಿಸರ್ಜಿಸಬೇಡಿ ಎಂದು ಅರಿವು ಮೂಡಿಸಲಾಯಿತು. ಪಿಡಿಒ ಬಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ, ಶ್ರೀಧರ್ ಇತರರಿದ್ದರು.