ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಪಡೆದುಕೊಂಡ ಕೂಡುಮಂಗಳೂರು ಬಿವೈಸಿ ಚಿನ್ಮಿತ ತಂಡ. 
ಜಿಲ್ಲೆ

ಬಿವೈಸಿ ಚಿನ್ಮಿತ ತಂಡಕ್ಕೆ ವಾಲಿಬಾಲ್ ಟ್ರೋಫಿ

ಶನಿವಾರಸಂತೆ: ಮಾಲಂಬಿ ಬ್ರದರ್ಸ್ ಸಂಘದ ವತಿಯಿಂದ ಸಮಿಪದ ಮಾಲಂಬಿ ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕಿನ ವಿವಿಧೆಡೆಯಿಂದ ವಾಲಿಬಾಲ್ ತಂಡಗಳು ಭಾಗವಹಿಸಿದ್ದವು.

ಪಂದ್ಯಾವಳಿಯಲ್ಲಿ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಬಿವೈಸಿ ಚಿನ್ಮಿತ ಕನ್‌ಸ್ಟ್ರಕ್ಷನ್ ತಂಡ ಪ್ರಥಮ ಸ್ಥಾನ ಪಡೆದು ವಾಲಿಬಾಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡರೆ, ಮಾಲಂಬಿ ಬ್ರದರ್ಸ್ ಎ ತಂಡ ರನ್ನರ್ ಪ್ರಶಸ್ತಿ ಪಡೆಯಿತು. ಪಂದ್ಯಾವಳಿಯ ವೈಯಕ್ತಿಕ ವಿಭಾಗದಲ್ಲಿ ಎಂ.ಸಿ.ಸುನೀಲ್ ಉತ್ತಮ ಹೊಡೆತಗಾರ, ಎಂ.ಕೆ.ಮಂಜುನಾಥ್ ಬೆಸ್ಟ್ ಸೆಟ್ಟರ್ ಮತ್ತು ಸಂತು ಬೆಸ್ಟ್ ಆಲ್ರೌಂಡರ್ ಬಹುಮಾನ ಪಡೆದುಕೊಂಡರು.

ಮುಕ್ತಾಯ ಸಮಾರಂಭದಲ್ಲಿ ರೋಟರಿ ಮಲ್ಲೇಶ್ವರ ಆಲೂರು-ಸಿದ್ದಾಪುರ ಕ್ಲಬ್ ಸದಸ್ಯ ಎಂ.ಇ.ವೆಂಕಟೇಶ್, ಗ್ರಾ.ಪಂ. ಸದಸ್ಯರಾದ ಪಿ.ಎನ್.ಗಂಗಾಧರ್, ಕಿರಣ್ ಪ್ರಮುಖರಾದ ಅಶೋಕ್, ಕೊಮರಪ್ಪ, ದಿನೇಶ್ ಮಾಲಂಬಿ, ನಾಗೇಶ್ ಮುಂತಾದವರಿದ್ದರು.