ಜಿಲ್ಲೆ

ಅವೈಜ್ಞಾನಿಕ ಜಾತಿ ಜನಗಣತಿ ವಿರುದ್ಧ ಸಿಡಿದ ಒಕ್ಕಲಿಗರು

ಹರೀಶ್​​ ಕೆ.ಸಿ.

ಬೆಂಗಳೂರು:ಕಾಂತರಾಜು ಆಯೋಗ ತಯಾರಿಸಿದ ಅವೈಜ್ಞಾನಿಕ ಜಾತಿ ಜನಗಣತಿ ವರದಿಯನ್ನು ಆರಂಭದಿಂದ ತೀವ್ರವಾಗಿ ವಿರೋಧಿಸಿಕೊಂಡು ಬರುತ್ತಿರುವ ರಾಜ್ಯದ ಬಲಿಷ್ಠ ಸಮುದಾಯಗಳಲ್ಲೊಂದಾದ ಒಕ್ಕಲಿಗರ ಸಮುದಾಯ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ವಿರುದ್ಧ ಸಿಡಿದೆದ್ದಿದೆ.

ವರದಿ ಜಾರಿಯಾದರೆ ಸರ್ಕಾರವನ್ನೇ ಬೀಳುವ ಶಕ್ತಿ ಸಮುದಾಯಕ್ಕಿದೆ. ಏ.17ರ ನಂತರ ಅವೈಜ್ಞಾನಿಕ ಜಾತಿಗಣತಿ ವರದಿ ವಿರುದ್ಧ ನಡೆಸುವ ಹೋರಾಟದ ರೂಪುರೇಷಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಅನ್ಯಾಯಕ್ಕೆ ಒಳಗಾಗಿರುವ ಲಿಂಗಾಯತ ಮತ್ತು ಬ್ರಾಹ್ಮಣ ಸೇರಿ ಇತರೆ ಸಮುದಾಯಗಳನ್ನು ಒಟ್ಟುಗೂಡಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ರಾಜ್ಯವೇ ಸ್ಥಬ್ಧವಾಗುವ ರೀತಿಯಲ್ಲಿ ಬಂದ್​ ಮಾಡಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘ, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ. ಇದು ಕಾಂತರಾಜು ವರದಿಯಲ್ಲ. ಸಿದ್ದರಾಮಯ್ಯ ವರದಿ. ಇದನ್ನು ಅನುಷ್ಠಾನಕ್ಕೆ ತಂದರೆ ಹಿಂದೆ ನಮ್ಮ ಸಮುದಾಯ ನಡೆಸಿದ್ದ ಹೋರಾಟದ ಮಾದರಿಯಲ್ಲೇ ಬೀದಿಗೆ ಇಳಿದು ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು. ಜನಾಂಗಕ್ಕೆ ಅನ್ಯಾಯವಾದರೆ ಎಲ್ಲ ನಿರ್ದೇಶಕರು ರಾಜೀನಾಮೆ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂದ ನಿರ್ದೇಶಕರು ಹೇಳಿದರು.

ಸಂಘದ ಉಪಾಧ್ಯಕ್ಷ ಎಲ್​.ಶ್ರೀನಿವಾಸ್​, ಸಹಾಯಕ ಕಾರ್ಯದರ್ಶಿ ಹನುಮಂತರಾಯಪ್ಪ, ಖಜಾಂಚಿ ನಲ್ಲಿಗೆರೆ ಬಾಲು, ಸಂಘದ ನಿರ್ದೇಶಕರಾದ ಸಿ.ಎಂ.ಮಾರೇಗೌಡ, ಸಿ.ಜಿ.ಗಂಗಾಧರ್​, ಕೆ. ಎಸ್​. ಸುರೇಶ್​, ಎಚ್​.ಸಿ. ಜಯಮುತ್ತು, ಹನುಮಂತಯ್ಯ, ಮಾರೇಗೌಡ, ಆಂಜನಪ್ಪ, ಪ್ರಕಾಶ್​, ಲೋಕೇಶ್​ ನಾಗರಾಜಯ್ಯ, ವೆಂಕಟರಾಮೇಗೌಡ, ದೇವರಾಜು, ರಘುಗೌಡ ಮತ್ತಿತರರಿದ್ದರು.

ಜಿಯೋ ಟ್ಯಾಗ್​ ಸಮೀಕ್ಷೆ ನಡೆಸಿ:

ಜನಗಣತಿ ವರದಿಯಲ್ಲಿ ನಮ್ಮ ಸಮುದಾಯದ ಜನಸಂಖ್ಯೆಯನ್ನೇ ಕಡಿಮೆ ತೋರಿಸಲಾಗಿದೆ. ಸಮುದಾಯದಲ್ಲಿ 117 ಉಪ ಪಂಗಡಗಳಿವೆ. ಈ ಉಪ ಪಂಗಡಗಳ ಸಂಖ್ಯೆಯನ್ನು ಕಡಿಮೆಗೊಳಿಸಿ ನಮ್ಮಲ್ಲಿಯೇ ವೈರತ್ವ ಮೂಡಿಸಲು ಯತ್ನಿಸಲಾಗಿದೆ ಎಂದರು. ರಾಜ್ಯದಲ್ಲಿ ಆಧಾರ್​ ಸಂಖ್ಯೆ ಪ್ರಕಾರ ಅಂದಾಜು 7 ಕೋಟಿ ಜನಸಂಖ್ಯೆ ಇದೆ. 1 ಕೋಟಿ ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ವರದಿ ನ್ಯೂನತೆಯಿಂದ ಕೂಡಿದೆ. ಸಮೀಕ್ಷೆ ವೇಳೆ ಸಾಕಷ್ಟು ಲೋಪದೋಷಗಳಾಗಿವೆ. ವರದಿ ಅನುಷ್ಠಾನದಿಂದ ಒಕ್ಕಲಿಗ, ಲಿಂಗಾಯತ ಸೇರಿ ಹಲವು ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಹಾಗಾಗಿ, ಪ್ರತಿಯೊಬ್ಬರ ಆಧಾರ್​ ಕಾರ್ಡ್​ನೊಂದಿಗೆ ಜಿಯೋ ಟ್ಯಾಗ್​ ಮೂಲಕ ಸಮೀೆ ನಡೆಸಿದರೆ ಎಲ್ಲ ವರ್ಗಗಳ ಜನಸಂಖ್ಯೆ ನಿಖರವಾಗಿ ತಿಳಿಯಲಿದೆ ಎಂದು ಸಂದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಹೇಳಿದರು.

ನಾವೇ ಸಮೀಕ್ಷೆ ಮಾಡ್ತೀವಿ:

ಎಷ್ಟೇ ರ್ಖಚಾದರೂ ಸಂದಿಂದ ಪ್ರತ್ಯೇಕ ಜಾತಿಗಣತಿ ಸಮೀಕ್ಷೆ ಮಾಡುತ್ತೇವೆ. ಇದಕ್ಕಾಗಿ ಸಾಫ್ಟ್​​​​ವೇರ್​ ಸಿದ್ಧಪಡಿಸಲಾಗುವುದು. ಬೆಂಗಳೂರಿನಲ್ಲಿ ದೊಡ್ಡಮಟ್ಟದ ಸಭೆ ಕರೆದು ಹೋರಾಟಕ್ಕೆ ಕರೆ ನೀಡುತ್ತೇವೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಹೋರಾಟಕ್ಕೆ ಕರೆ ನೀಡಲಾಗುವುದು. ಸಭೆ ಯಾವಾಗ ಮಾಡಬೇಕೆಂದು ಸಮುದಾಯದ ಮೂವರು ಸ್ವಾಮೀಜಿಗಳು ಹೇಳುತ್ತಾರೆ. ಸಮುದಾಯದ ಜನರ ಉಪಯೋಗ ಪಡೆದು ಸರ್ಕಾರದಲ್ಲಿ ಮಂತ್ರಿ ಹಾಗೂ ಶಾಸಕರಾಗಿರುವ ಸಮುದಾಯದ ರಾಜಕೀಯ ಪ್ರತಿನಿಧಿಗಳು ವರದಿಯನ್ನು ಕಡ್ಡಿಮುರಿದಂತೆ ವಿರೋಧಿಸಬೇಕು. ಕೂಡಲೇ ಎಲ್ಲರೂ ಹೋರಾಟಕ್ಕೆ ಧುಮುಕಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಕರೆ ಕೊಟ್ಟರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯರಾಗಿದ್ದ ಕಾಂತರಾಜು ಅವಧಿಯಲ್ಲಿ ಸಿದ್ದಪಡಿಸಲಾಗಿದ್ದ ಈ ವರದಿ ಅವೈಜ್ಞಾನಿಕ. ವರದಿ ತಯಾರಿಸಿ 10 ವರ್ಷ ಸಮೀಪಿಸುತ್ತಿದೆ. 10 ವರ್ಷಕ್ಕೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕೆಂಬ ನಿಯಮ ಇರುವುದರಿಂದ ಈ ವರದಿ ಅಪ್ರಸ್ತುತ. 10 ವರ್ಷದಲ್ಲಿ ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ.ಆದ್ದರಿಂದ, ನಿಖರ ದತ್ತಾಂಶ ಪಡೆದು ಹೊಸದಾಗಿ ಜಾತಿಗಣತಿ ವರದಿ ತಯಾರಿಸುವುದು ಸೂಕ್ತ.

| ಡಾ.ರೇಣುಕಾಪ್ರಸಾದ್​, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ.

2015ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆ 6.5 ಕೋಟಿಯಷ್ಟು ಇತ್ತು. ಆದರೆ, ಈ ಸಮೀಕ್ಷೆ ವರದಿಯಲ್ಲಿ 5.98 ಕೋಟಿ ಜನ ಇದ್ದಾರೆ ಎಂದು ತೋರಿಸಲಾಗಿದೆ. ಉಳಿದ 52 ಲಕ್ಷ ಜನಸಂಖ್ಯೆ ಯಾವ ವರ್ಗಕ್ಕೆ ಸೇರಿರುವ ಬಗ್ಗೆ ತಿಳಿಯುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರವು ಮೊಂಡತನದಿಂದ ವರದಿಯನ್ನು ಜಾರಿಗೆ ತರಲು ತರಾತುರಿಯಲ್ಲಿ ಯತ್ನಿಸುತ್ತಿದೆ.

| ಗಾ.ನಂ.ಶ್ರೀಕಂಠಯ್ಯ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ.