ಬೆಳ್ತಂಗಡಿ: ಒಕ್ಕಲಿಗ ಗೌಡರು ಭಾಷಾವಾರು, ಪ್ರಾಂತ್ಯವಾರು ಸಂಪ್ರದಾಯ, ಆಚರಣೆಗಳಲ್ಲಿ ವ್ಯತ್ಯಾಸಗಳಿದ್ದರೂ, ಸಮಾಜ ಎಂದಾಗ ಎಲ್ಲರೂ ಒಂದೇ ಭಾವನೆಯಿಂದ ಸಂಟಿತರಾಗಬೇಕು, ಸಮಾಜಮುಖಿ ಚಿಂತನೆಯಿಂದ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.
ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನೂತನ ಪದಾಧಿಕಾರಿಗಳ ಪದಗ್ರಹಣ, ಆಂಬುಲೆನ್ಸ್ ಲೋಕಾರ್ಪಣೆೆ, ಅಶಕ್ತರಿಗೆ ನೆರವು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ ಉರುವಾಲು ಮಾತನಾಡಿದರು. ಮಂಗಳೂರು ದ.ಕ ಒಕ್ಕಲಿಗ ಗೌಡರ ಸೇವಾ ಸಂಘ ಅಧ್ಯಕ್ಷ ಡಿ.ಬಿ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಮಾಜಿ ಸಚಿವ ಜೆ.ಗಂಗಾಧರ ಗೌಡ, ಮಾಜಿ ಶಾಸಕ ಸಂಜೀವ ಮಠಂದೂರು, ಬೇಗೂರು ಶ್ರೀ ನಾಗನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ನಾರಾಯಣ ಗೌಡ ಬೇಗೂರು, ಉಜಿರೆ ಒಕ್ಕಲಿಗ ಗೌಡರ ಮಹಿಳಾ ಸಂ ಅಧ್ಯಕ್ಷೆ ಅಪರ್ಣಾ ಶಿವಕಾಂತ್ ಗೌಡ, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಕಡಬ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಸ್ಥಾಪಾಕಾಧ್ಯಕ್ಷ ಸುರೇಶ್ ಗೌಡ ಬೈಲು, ಮಂಗಳೂರು ಯುವ ಟಕ ಅಧ್ಯಕ್ಷ ಕಿರಣ್‌ಕುಮಾರ್ ಬಡ್ಲೆಗುತ್ತು, ಬೆಳ್ತಂಗಡಿ ಸ್ವಾಮಿ ಕನ್‌ಸ್ಟ್ರಕ್ಷನ್ ಕೆ.ಎಂ.ನಾಗೇಶ್‌ಕುಮಾರ್ ಗೌಡ, ಪುತ್ತೂರು ತಾಲೂಕು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಅಧ್ಯಕ್ಷ ರವಿ ಗೌಡ ಮುಂಗ್ಲಿ ಮನೆ, ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಸಂಘ ಅಧ್ಯಕ್ಷ ಬಾಲಕೃಷ್ಣ ಗೌಡ, ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಪ್ರಾಸ್ತಾವಿಕ ಮಾತನಾಡಿದರು. ಗಾಯತ್ರಿ ಮತ್ತು ನವೀನ್ ಗೌಡ ಕಾರ್ಯಕ್ರಮ ನಿರೂಪಿಸಿದರು.
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ರಂಜನ್ ಜಿ.ಗೌಡ ಬೆಳ್ತಂಗಡಿ, ಕೆ.ವಿಜಯ ಗೌಡ ವೇಣೂರು, ಕಾರ್ಯಾಧ್ಯಕ್ಷ ಶ್ರೀನವಾಸ ಗೌಡ ಬೆಳಾಲು, ಕೆ.ಜಯಂತ್ ಗೌಡ ಗುರಿಪಳ್ಳ, ಕಾರ್ಯದರ್ಶಿ ಭರತ್ ಗೌಡ ಬಂಗಾಡಿ, ಕೋಶಾಧಿಕಾರಿ ಸೂರಜ್ ಗೌಡ ವಳಂಬ್ರ, ಸ್ಥಾಪಕ ಟ್ರಸ್ಟಿಗಳಾದ ನವೀನ್ ಗೌಡ ಬಿ.ಕೆ.ನಿಡ್ಲೆ, ವಸಂತ ಗೌಡ ಮರಕಡ ಮಚ್ಚಿನ, ದಾಮೋದರ ಗೌಡ ಸುರುಳಿ ಸಹಕರಿಸಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಅವರಿಂದ ಆಂಬುಲೆನ್ಸ್ ಕೊಡುಗೆ, ಕೆ.ಜಯಂತ್ ಗೌಡ ಆಕ್ಸಿಜನ್, ಸ್ಟ್ರೆಚರ್ ಕೊಡುಗೆ, ಅಶಕ್ತರಿಗೆ ಆರ್ಥಿಕ ನೆರವು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ನಿವೃತ್ತ ಸೈನಿಕರಿಗೆ ಗೌರವಾರ್ಪಣೆ ನಡೆಯಿತು.
ದೇಶಕ್ಕಾಗಿ ಸೈನಿಕರ ತ್ಯಾಗದಂತೆ ಸಮಾಜದ ಅಭಿವೃದ್ಧಿಗೆ ಎಲ್ಲರು ಒಗ್ಗೂಡಿ ಮುನ್ನಡೆಯಬೇಕು. ಮನೆಯೊಂದು ಮೂರು ಬಾಗಿಲು ಆಗದೆ ಮನೆಯೊಂದು ಒಂದೇ ಬಾಗಿಲು ಆಗಬೇಕು. ತಾಲೂಕು, ರಾಜ್ಯದಲ್ಲಿ ಒಕ್ಕಲಿಗ ಸಮಾಜದಲ್ಲಿ ಅನೇಕ ಸಾಧಕರಿದ್ದು, ಅವರನ್ನೆಲ್ಲ ಒಟ್ಟು ಸೇರಿಸಿ ಮುಂದಿನ ದಿನಗಳಲ್ಲಿ ಸಂಟಿತ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವಿದೆ. ಕಿರಣ್‌ಚಂದ್ರ ಪುಷ್ಪಗಿರಿ ಉರುವಾಲು, ಧಾರ್ಮಿಕ ಮುಖಂಡ