ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಎಲ್ಎಸ್ಐ ವಿನ್ಯಾಸ ಕುರಿತು ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿರುವ 4 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ವಿವಿ ಡೀನ್ (ಆಕಾಡೆಮಿಕ್ಸ್) ಡಾ. ಪ್ರಕಾಶ ತೇವರಿ ಹಾಗೂ ರಜಿಸ್ಟ್ರಾರ್ ಡಾ. ಬಸವರಾಜ ಅನಾಮಿ ಉದ್ಘಾಟಿಸಿದರು. ಡಾ. ಸುಜಾತಾ ಕೋಟಬಾಗಿ, ಡಾ. ಸುನಿತಾ ಬೂದಿಹಾಳ, ಡಾ. ಸರೋಜಾ ಸಿದ್ದಮಲ್ ಇದ್ದರು.
ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬೆಳಗಾವಿ, ಲಕ್ಷೆ್ಮೕಶ್ವರದಿಂದ ವಿವಿಧ ಇಂಜಿನಿಯರಿಂಗ್ ಕಾಲೇಜ್ಗಳ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಪರಿಕಲ್ಪನೆ ಹಂತದಿಂದ ತಯಾರಿಕೆ ಹಂತದವರೆಗೆ ವಿಎಲ್ಎಸ್ಐ ವಿನ್ಯಾಸ ಕುರಿತು ತರಬೇತಿ ನೀಡಲಾಗುತ್ತದೆ. ವಿಎಲ್ಎಸ್ಐ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ ಮತ್ತು ಜ್ಞಾನವನ್ನು ನೀಡಲು ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಕೆಎಲ್ಇ ತಾಂತ್ರಿಕ ವಿವಿ ತಿಳಿಸಿದೆ.
ಸಿಫೈವ್ ಮಾಜಿ ಉಪಾಧ್ಯಕ್ಷ ಡಾ. ಅನಂದ ಬರಿಯಾ ಮಾತನಾಡಿ ವಿಎಲ್ಎಸ್ಐ ವಿನ್ಯಾಸದಲ್ಲಿ ಪರಿಣತಿ ಹೊಂದವರಿಗೆ ಸೆಮಿಕಂಡಕ್ಟರ್ ಕೈಗಾರಿಕೆಗಳಲ್ಲಿ ಉತ್ತಮ ಅವಕಾಶಗಳಿವೆ ಎಂದು ಹೇಳಿದರು. ತರಬೇತಿ ಕಾರ್ಯಕ್ರಮದಲ್ಲಿ ರಾಂಬಸ್ ಚಿಪ್ ಟೆಕ್ನಾಲಾಜೀಸ್ನ ಡಾ. ನಿತೀನ, ಗ್ಲೋಬಲ್ ಫೌಂಡ್ರೀಸ್ನ ಡಾ. ಜಗದೀಶನ್ ವಿ., ಬೆಂಗಳೂರಿನ ಅಲ್ಪಾವೇವ್ಸ ಐಪಿ ಕಂಪನಿಯ ಡಿಎಫ್ಟಿ ಇಂಜಿನಿಯರ್ ರಾಕೇಶ ಸಿಂಗನಹಳ್ಳಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.