ಜಿಲ್ಲೆ

ಗ್ರಾಮ ಲೆಕ್ಕಾಧಿಕಾರಿ ಕಾರಿನಲ್ಲಿ 1.10ಕೋಟಿ ರೂ. ನಗದು ಪತ್ತೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ದಾಖಲೆ ಇಲ್ಲದೆ ಬೆಳಗಾವಿಯಿಂದ ಬಾಗಲಕೋಟೆಗೆ 1.10ಕೋಟಿ ರೂ. ಅಕ್ರಮ ಸಾಗಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಢವಳೇಶ್ವರ ತನ್ನ ಕಾರಿನಲ್ಲಿ 1.10ಕೋಟಿ ರೂ. ಸಾಗಿಸುತ್ತಿರುವ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಹಲಗತ್ತಿ ಚೆಕ್ ಪೋಸ್ಟ್ ನಲ್ಲಿ ಖಚಿತ ದಾಳಿ ನಡೆಸಿದ ರಾಮದುರ್ಗ ಪೊಲೀಸರು ಆರೋಪಿ ಬಳಿ ಇದ್ದ ಹಣ ವಶಕ್ಕೆ ಪಡೆದಿದ್ದಾರೆ.

ರಾಮದುರ್ಗ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೋರಗಾಂವ ಗ್ರಾಮ ಸೇವಕ ಕಾರಿನಲ್ಲಿ 1.10 ಕೋಟಿ ರೂ. ಪತ್ತೆ ಆಗಿದೆ. ಹಣದ ಮೂಲ ತಿಳಿಸದ ಕಾರಣ ಈ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅವರು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.

-ಡಾ.ಭೀಮಾಶಂಕರ ಗುಳೇದ, ಎಸ್ಪಿ, ಬೆಳಗಾವಿ