ವಿಜಯಪುರ: ಭಾರತವನ್ನು ಆಧ್ಯಾತ್ಮಿಕ ನೆಲೆಯಲ್ಲಿ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಮಹೇಶ ಕ್ಯಾತನ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಹಾಗೂ ಕಸಾಪ ನಗರ ಟಕಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯುವಕರಲ್ಲಿ ಶಕ್ತಿ ಹಾಗೂ ಪ್ರೇರಣೆ ನೀಡಿದ ವಿವೇಕಾನಂದರು ಜಗತ್ತು ಕಂಡ ಮಹಾನ್ ಚೇತನ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಣಾಧಿಕಾರಿ ಎಸ್.ಎಲ್. ಇಂಗಳೇಶ್ವರ ಮಾತನಾಡಿ, ವಿವೇಕಾನಂದರು ಯುವಕರ ಸ್ಪೂರ್ತಿಯ ಸೆಲೆಯಾಗಿದ್ದರು. ಸದ್ಯದ ಸಮಾಜಕ್ಕೆ ವಿವೇಕವಾಣಿ ಸಾರ್ವಕಾಲಿಕ. ಯುವ ಸಪ್ತಾಹ ಕಾರ್ಯಕ್ರಮ ವಿವೇಕಾನಂದರ ಹೆಸರಿನಲ್ಲಿ ಆಚರಿಸುತ್ತಿರುವುದು ಅತ್ಯಂತ ಸೂಕ್ತ ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಡಾ. ಆನಂದ ಕುಲಕರ್ಣಿ ಮಾತನಾಡಿ, ಸ್ವಾಮಿ ವಿವೇಕಾನಂದರನ್ನು ವಿಶ್ವಮಾನವರೆಂದು ಕರೆಯುತ್ತಾರೆ. ಭಾರತ ಮಣ್ಣೇ ನನಗೆ ಪವಿತ್ರ. ಅದರ ನೀರೆ ನನಗೆ ತೀರ್ಥ. ಮಾತೃಭೂಮಿ ನನ್ನ ದೇವರೆಂದು ತಿಳಿದು ಬದುಕಿದ ಮಹಾಸಂತ ಎಂದರು.
ಶೇಷರಾವ ಮಾನೆ, ಎಂ.ಎಂ. ಖಲಾಸಿ, ಸುಮಂಗಲಾ ಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವರಹಿಪ್ಪರಗಿ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷ ಸಂಗಮೇಶ ಕರೆಪ್ಪಗೋಳ ಹಾಗೂ ಶ್ರೀ ಮಹಾಲಕ್ಷಿ$್ಮ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಕಾಸ ಪದಕಿ ಅವರನ್ನು ಸನ್ಮಾನಿಸಲಾಯಿತು.
ನಗರ ಟಕ ಗೌರವಾಧ್ಯಕ್ಷೆ ಜಯಶ್ರೀ ಹಿರೇಮಠ, ಭೀಮಪ್ಪ ಮಸಬಿನಾಳ, ರವಿ ಬಿಸನಾಳ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಸಿದ್ರಾಮಯ್ಯ ಲಕ್ಕುಂಡಿಮಠ, ರಾಜೇಸಾಬ ಶಿವನಗುತ್ತಿ, ಸುಖದೇವಿ ಅಲಬಾಳಮಠ, ಜಿ.ಎಸ್. ಬಳ್ಳೂರ, ಯಮನಪ್ಪ ಪವಾರ, ಶ್ರೀಕಾಂತ ನಾಡಗೌಡ, ದೇವಣ್ಣ ಹಾವಗೊಂಡ, ಅಮರಸಿದ್ದ ಪೂಜಾರಿ, ಬಸವರಾಜ ಜಂಗಮಶೆಟ್ಟಿ, ಅರವಿಂದ ಇನಾಮದಾರ, ಟಿ.ಆರ್. ಹಾವಿನಾಳ, ಪ್ರದಿಪ ನಾಯ್ಕೋಡಿ, ವೈ.ಎಚ್. ಲಂಬು ಉಪಸ್ಥಿತರಿದ್ದರು.
ಮಹಮ್ಮದಗೌಸ ಹವಾಲ್ದಾರ ಪ್ರಾಸ್ತಾವಿಕ ಮಾತನಾಡಿದರು. ಮಮತಾ ಮುಳಸಾವಳಗಿ ಸ್ವಾಗತಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಕೆ.ಎಸ್. ಹಣಮಾಣಿ ವಂದಿಸಿದರು.