ಜಿಲ್ಲೆ

ಯುವ ಪೀಳಿಗೆಗೆ ವಿವೇಕಾನಂದರೇ ಆದರ್ಶ

ಬಸವರಾಜ ವೀರಪ್ಪ ಗರಗ

ಕಲಘಟಗಿ: ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಶಾಶ್ವತ ಜೀವಂತಿಕೆಯನ್ನು ಒಳಗೊಂಡಿದ್ದು ಇಂದಿನ ಯುವ ಪೀಳಿಗೆಗೆ ಸ್ಪೂರ್ತಿ ಮತ್ತು ಆದರ್ಶಪ್ರಾಯವಾಗಿದೆ ಎಂದು ವಿವೇಕ ಹೋರಾಟ ಸಮಿತಿ ಅಧ್ಯಕ್ಷ ರಾಜು ಆರ್. ಕಲಘಟಗಿ ಹೇಳಿದರು.

ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಪಟ್ಟಣದ ವಿವೇಕಾನಂದ ನಗರದಲ್ಲಿ ಭಾನುವಾರ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಯುವಕರಲ್ಲಿ ಸ್ಪೂರ್ತಿಯ ಸೆಲೆಯಾಗಿ ಭಾರತದ ಸಂತರಲ್ಲಿ ವೀರ ಸನ್ಯಾಸಿಯಾಗಿ ತನ್ನದೆ ಆದರ್ಶಗಳ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ಯುವಕರು ಅವರ ಕಥಾದರ್ಶನವನ್ನು ಅರಿತುಕೊಳ್ಳಬೇಕು ಎಂದರು.

ಪತ್ರಕರ್ತ ಉಮೇಶ ಜೋಶಿ ಮಾತನಾಡಿ, ವಿವೇಕಾನಂದರು ತಮ್ಮ ಬದುಕಿನುದ್ದಕ್ಕೂ ದೇಶವನ್ನು ಪ್ರಪಂಚಕ್ಕೆ ವಿಶ್ವ ಭಾರತವಾಗಿ ಪರಿಚಯಿಸುವ ಕನಸನ್ನೇ ಇಟ್ಟುಕೊಂಡವರಾಗಿದ್ದು, ಯುವಕರ ಕಣ್ಮಣಿಯಾಗಿ ನಕ್ಷತ್ರದ ತಾರೆಯಂತೆ ಹೊಳೆಯುವ ಪ್ರತೀಕಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.

ಮಂಜುನಾಥ ಹಬೀಬ, ವಿಠ್ಠಲ ಪವಾರ, ಪ್ರಕಾಶ ಬಂಗೊಳ್ಳಿ, ಟೋಪಣ್ಣ ಲಮಾಣಿ, ವಾಚಪ್ಪ ಲಮಾಣಿ, ವಾಸು ಲಮಾಣಿ, ನಿಂಗಪ್ಪ ಹುಲಿಹೊಂಡ, ಪ್ರಕಾಶ ಲಮಾಣಿ. ಮಹಾಂತೇಶ ವಿರಕ್ತಿಮಠ, ರವಿ ಲಮಾಣಿ, ಮಂಜುನಾಥ ತಾಂಬೆ, ಅಶೋಕ ಅರ್ಕಸಾಲಿ, ಶ್ರೀಧರ ಸಾವಕಾರ, ರವಿ ಲಮಾಣಿ, ಸಂಜಯ ಚವ್ಹಾಣ, ವಿಜಯ ಮೋರೆ, ಭಾನಪ್ಪ ಲಮಾಣಿ, ವಸಂತ ಲಮಾಣಿ. ಇತರರಿದ್ದರು.