ಬೆಳ್ತಂಗಡಿ: ವಿವೇಕಾನಂದರು ನಮಗೆ ಆದರ್ಶ ವ್ಯಕ್ತಿ. ಅವರ ವಿಚಾರಧಾರೆ, ಚಿಂತನೆ ಮತ್ತು ಬದುಕಿನ ಹಾದಿ ನಮಗೆ ಸ್ಫೂರ್ತಿ. ಆದ್ದರಿಂದ ವೈಚಾರಿಕ ಸ್ವಾವಲಂಬನೆ ನೀಡುವುದೇ ಶಿಕ್ಷಣ ಎಂದು ಆಂಧ್ರಪ್ರದೇಶದ ಕಡಪಾದ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಅನುಪಮಾನಂದಜೀ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿವೇಕಾನಂದರ ಶಿಕ್ಷಣ ತತ್ವಗಳು ಮತ್ತು ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಮತ್ತು ಶ್ರೀ ರಾಮಕೃಷ್ಣ ಆಶ್ರಮದ ಬಗ್ಗೆ ಕ್ಯಾಪ್ಟನ್ ಬೆಳ್ಳಾಲ ಗೋಪಿನಾಥ್ ಮಾಹಿತಿ ನೀಡಿದರು. ಸ್ವಾಮಿ ಅನುಪಮಾನಂದಜೀ ಅವರನ್ನು ಗೌರವಿಸಲಾಯಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ.ಸತೀಶ್ಚಂದ್ರ ಎಸ್., ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಧನ್ಯಕುಮಾರ್, ಬಿ.ಎಡ್. ಕಾಲೇಜು ಪ್ರಾಂಶುಪಾಲ ಡಾ.ಸಂತೋಷ್ ಸಲ್ಡಾನ, ಶ್ರೀ ಧ.ಮಂ.ವಸತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುನೀಲ್ ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು. ತೇಜಸ್ವಿನಿ ಕಾಯಕ್ರಮ ನಿರೂಪಿಸಿದರು.