ಜಿಲ್ಲೆ

ಸ್ವಾಮಿ ವಿವೇಕಾನಂದರ ಜಯಂತಿ

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ವಿವೇಕ ಜಾಗ್ರತ ಬಳಗದ ವತಿಯಿಂದ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಉತ್ಸವವನ್ನು ಜ. 18ರಂದು ಸಂಜೆ 4ಕ್ಕೆ ವಿಶ್ವೇಶ್ವರ ನಗರದ ಕ್ರಿಕೆಟ್ ಅಕಾಡೆಮಿ ಹತ್ತಿರದ ವಿವೇಕ ಸ್ಪುರಣ-2ರಲ್ಲಿ ಆಚರಿಸಲಾಗುತ್ತಿದೆ.

ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್ ಆಪ್ತ ಸೇವಕ ಡಿ.ಎಸ್. ಯಶವಂತ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಾರ್ವಜನಿಕರು ಭಾಗವಹಿಸಬೇಕೆಂದು ಬಳಗದ ಅಧಿಕಾರಿಗಳಾದ ಡಾ. ಪಂಕಜಾ ಬ್ಯಾಕೋಡಿ ಮತ್ತು ಸೇವಾಶ್ರೀ ಡಾ. ಬಿ.ಎಸ್. ಮಾಳವಾಡ ಪ್ರಕಟಣೆಯಲ್ಲಿ ಕೋರಿದ್ದಾರೆ.