ಜಿಲ್ಲೆ

ವಿವೇಕ ಬಳಗದಿಂದ ನವರಾತ್ರಿ ಉತ್ಸವ

Dharwada - Basavaraj Idli

ಹುಬ್ಬಳ್ಳಿ: ಆಧ್ಯಾತ್ಮಿಕತೆಯಿಂದ ದೈನಂದಿನ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ ಎಂದು ವಿವೇಕ ಜಾಗೃತ ಬಳಗ ಅಧಿಕಾರಿ ಡಾ. ಪಂಕಜಾ ಬ್ಯಾಕೋಡಿ ಹೇಳಿದರು.

ಇಲ್ಲಿಯ ನವನಗರ ಸಿಟಿ ಪಾರ್ಕ್ ನಲ್ಲಿ ವಿವೇಕ ಜಾಗೃತ ಬಳಗದ ವತಿಯಿಂದ ಆಯೋಜಿಸಿದ್ದ ನವರಾತ್ರಿ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.

ದೇವಿ ಆರಾಧನೆಯಿಂದ ಕಾಮ, ಕ್ರೋಧ, ಮದ, ಮತ್ಸರ, ಅಹಂಕಾರ ತೊರೆಯಲು ಸಾಧ್ಯ ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸಿದರು. ನಿರಂತರ ಸಾಧನೆಯಿಂದ ಜೀವನದಲ್ಲಿ ಸಲತೆ ಸಿಗುತ್ತದೆ. ದೇವರ ನಾಮಸ್ಮರಣೆಯೊಂದಿಗೆ, ಇಚ್ಛಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂದರು.

ನಿವೃತ್ತ ಗ್ರಂಥಪಾಲಕ ಹಾಗೂ ಸೇವಾಶ್ರೀ ಡಾ. ಬಿ.ಎಸ್. ಮಾಳವಾಡ, ನವರಾತ್ರಿ ಹಬ್ಬದ ಮಹತ್ವ ವಿವರಿಸಿದರು. ಬಳಗದ ಅಧ್ಯಕ್ಷ ಕಲ್ಲಪ್ಪ ಮರದಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಶಿಲ್ಪಾ ಸೋಮವಾರ ಸ್ವಾಗತಿಸಿದರು, ಉಪಾಧ್ಯ ವಿಜಯಾ ಪರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಿ ಉಮೇಶ ಮರದಣ್ಣವರ ವಂದಿಸಿದರು. ಆಶಾ ಜಾಧವ ಕಾರ್ಯಕ್ರಮ ನಿರೂಪಿಸಿದರು.

ಶ್ರೀರಾಮರಾ ಸ್ತೋತ್ರ ಮತ್ತು ದೇವಿ ನಾಮಾವಳಿಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು. ಡಿವೈನ್ ಪಾರ್ಕ್ ಪ್ರಕಟಣೆಗಳ ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.