ಜಿಲ್ಲೆ

ಬೇಸಿಗೆ ಶಿಬಿರ ಸಮಾರೋಪ

Dharwada - Basavaraj Idli

ಹುಬ್ಬಳ್ಳಿ: ಪಾಲಕರು ಮಕ್ಕಳಿಗೆ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿ, ಅವರ ಆರೋಗ್ಯ ರಣೆಗೆ ಗಮನ ಹರಿಸಬೇಕೆಂದು ವಿವೇಕ ಜಾಗೃತ ಬಳಗದ ಅಧಿಕಾರಿ ಡಾ. ಪಂಕಜಾ ಬ್ಯಾಕೋಡಿ ಹೇಳಿದರು.

ಇಲ್ಲಿಯ ಗೋಕುಲ ರಸ್ತೆ ಸನ್ಮಾರ್ಗ ನಗರದ ಶ್ರೀಬಾಲಗಣಪತಿ ದೇವಸ್ಥಾನದಲ್ಲಿ ವಿವೇಕ ಜಾಗೃತ ಬಳಗದ ವತಿಯಿಂದ ಏರ್ಪಡಿಸಿದ್ದ ಬೇಸಿಗೆ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು.

ಮನೆಯ ಊಟ ಮತ್ತು ಉಪಹಾರ ಸೇವಿಸಬೇಕು. ಹೊರಗಿನ ಪದಾರ್ಥ ತ್ಯಜಿಸಬೇಕು. ಶಿಬಿರದಲ್ಲಿ ಕಲಿತ ಎಲ್ಲ ಅಂಶಗಳನ್ನು ನಿತ್ಯ ರೂಢಿಸಿಕೊಂಡು ಉತ್ತಮ ಆರೋಗ್ಯ ಹೊಂದಲು ತಿಳಿಸಿದರು.

ಸೇವಾಶ್ರೀ ಡಾ. ಬಿ.ಎಸ್. ಮಾಳವಾಡ ಮಾತನಾಡಿ, ಮಕ್ಕಳು ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.

ಬಳಗದ ಅಧ್ಯ ಕಲ್ಲಪ್ಪ ಮರದಣ್ಣವರ ಅಧ್ಯತೆ ವಹಿಸಿದ್ದರು. ಪಾಲಕರಾದ ಶಿವಾನಂದ ನಿರವಣಿ ಮತ್ತು ಭಾರತಿ ಕುಲಕಣಿರ್ ಶಿಬಿರದ ಅನಿಸಿಕೆ ಹಂಚಿಕೊಂಡರು.

ಅಪರ್ಣಾ ಕಮ್ಮಾರ ಮತ್ತು ಆಶಾ ಜಾಧವ 15 ದಿನಗಳ ಶಿಬಿರ ಸಂಟಿಸಿದ್ದರು. ಪ್ರಾರ್ಥನೆ, ಭಜನೆ, ಯೋಗಾಸನ, ನೀತಿ ಕಥೆಗಳು, ಸರಳ ಜ್ಞಾನ, ಲು ವ್ಯಾಯಾಮ, ನತ್ಯ ನಾಟಕ, ಚಿತ್ರಕಲೆ, ಕರಕುಶಲ ತರಬೇತಿ, ಶ್ರಮದಾಯಕ ಆಟಗಳ ತರಬೇತಿ ನೀಡಲಾಯಿತು.

30 ವಿದ್ಯಾಥಿರ್ಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರಾಥಿರ್ಗಳಿಗೆ ಉಪಯುಕ್ತ ಗ್ರಂಥಗಳನ್ನು, ಚಿತ್ರಕಲೆ ಪುಸ್ತಕ, ಪೆನ್ಸಿಲ್ ಮುಂತಾದವುಗಳನ್ನು ನೀಡಲಾಯಿತು.

ವಿಜಯಾ ಪರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚೇತನಾ ಬೇವಿನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಸುವರ್ಣಾ ವಂದಿಸಿದರು.