ಜಿಲ್ಲೆ

ವಿಠ್ಠಲ-ರುಕ್ಮಿಣಿ ಉತ್ಸವ ಮೂರ್ತಿ ಮೆರವಣಿಗೆ

ವೀರೇಶ ಸೌದ್ರಿ

ಮುಂಡರಗಿ: ಸ್ಥಳೀಯ ವಿಠ್ಠಲ-ರುಕ್ಮಿಣಿ ದೇವಸ್ಥಾನದ 47ನೇ ವಾರ್ಷಿಕೋತ್ಸವ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಜನೆ ಮೇಳದೊಂದಿಗೆ ವಿಠ್ಠಲ-ರುಕ್ಮಿಣಿ ಉತ್ಸವ ಮೂರ್ತಿ ಮೆರವಣಿಗೆ ಭಾನುವಾರ ಜರುಗಿತು. ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ದೇವಸ್ಥಾನದಿಂದ ಹೊರಟ ಮೆರವಣಿಗೆ ಕೊಪ್ಪಳ ಸರ್ಕಲ್, ಬೃಂದಾವನ ಸರ್ಕಲ್, ಗಾಂಧಿ ವೃತ್ತ, ಜಾಗೃತ ವೃತ್ತ, ಸರ್ ಸಿದ್ದಪ್ಪ ಕಂಬಳಿ ವೃತ್ತ, ಕಿತ್ತೂರ ಚನ್ನಮ್ಮ ವೃತ್ತದ ಮಾರ್ಗವಾಗಿ ಪುನಃ ದೇವಸ್ಥಾನ ತಲುಪಿತು. ವಾರ್ಷಿಕೋತ್ಸವದ ನಿಮಿತ್ತ ಮೂರು ದಿನಗಳಿಂದ ದೇವಸ್ಥಾನದಲ್ಲಿ ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶಂಕ್ರಪ್ಪ ಬೀಸೆ, ಶಿವಾಜಿ ಬೀಸೆ, ರಮೇಶ ಬೀಸೆ, ಬೂಗೇಶಭಟ್ ಜೋಶಿ, ವಸಂತ ಬೀಸೆ, ಸುಭಾಸ ಜೋಶಿ, ಹನುಮಂತಗೌಡ, ಮಾರುತಿ ಪಾಚಂಗಿ, ಯಂಕಪ್ಪ ಈಳಿಗೇರ, ವೆಂಕಟೇಶ ಗಾಯಕವಾಡ ಇತರರು ಇದ್ದರು.