ಕಲಬುರಗಿ : ನಗರದ ಶಹಾಬಜಾರದಲ್ಲಿರುವ ಆರಾಧನಾ ಕಾಲೇಜಿನಲ್ಲಿ ಸಭಾಂಗಣದಲ್ಲಿ ಇಂದು ಕನ್ನಡ ನಾಡು ಲೇಖಕರ ಓದುಗರ ಸಹಕಾರ ಸಂಘದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಠ್ಟಲರಾವ ಕುಲಕರ್ಣಿ ತಲೆಖಾನ ದತ್ತಿ ಉಪನ್ಯಾಸ ಸರಣಿಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ ಮಂಗಳವಾರ ಉದ್ಘಾಟಿಸಿದರು. ಸಂಘದ ಅದ್ಯಕ್ಷರಾದ ವಾರ್ತಾ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಅಪ್ಪಾರಾವ ಅಕ್ಕೊಣಿ, ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ರಂಗ ಕರ್ಮಿ ನಾರಾಯಣರಾವ್ ಕುಲಕರ್ಣಿ, ಓದುಗರ ಸಂಘದ ಕಾರ್ಯದರ್ಶಿ ಡಾ.ಶರಣಬಸಪ್ಪ ವಡ್ಡನಕೇರಿ, ಕಾಲೇಜಿನ. ಆಡಳಿತಾಧಿಕಾರಿ ಭೀಮರಾವ ಪಾಟೀಲ್, ಕನ್ನಡ ವಿಭಾಗದ ಸಂಯೋಜಕ ಕಾಶಿನಾಥ ಪಾಟೀಲ್ ಇದ್ದರು.