ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ಆಯ್ಕೆಯಾದ -ಲಾನುಭವಿಗಳಿಗೆ ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸವಲತ್ತು ವಿತರಿಸಿದರು. ಕರುಣಾಕರ ನಾಯ್ತೊಟ್ಟು, ಅಶೋಕ್ ಕುಮಾರ್ ಶೆಟ್ಟಿ, ಕರುಣಾಕರ ವಿ. ಉಪಸ್ಥಿತರಿದ್ದರು.
- ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿಕೆ
- ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ
ವಿಟ್ಲ: ಸರ್ಕಾರದ ಸವಲತ್ತುಗಳನ್ನು ಪಡೆಯುವುದು ಜನರ ಹಕ್ಕಾಗಿದ್ದು ಸವಲತ್ತನ್ನು ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ. ಕುಟುಂಬ ಸದಸ್ಯರಂತೆ ಎಲ್ಲರಿಗೂ ನೆರವು ನೀಡಲಾಗಿದೆ. ಕೇಂದ್ರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಟ್ಲ ಪಟ್ಟಣಕ್ಕೆ ಬಂದರೆ ಟ್ಯಾಂಕ್‌ಗಳು ಸಮರ್ಪಕವಾಗಿ ಬಳಕೆಯಾಗುತ್ತವೆ ಎಂದು ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ಆಯ್ಕೆಯಾದ ವೈಯಕ್ತಿಕ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ ಅನುದಾನ ಹಂಚಿಕೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕಾಗಿದೆ. ಯೋಜನೆಯ ಪ್ರಯೋಜನ ಬೇಡವೆಂದು ತಿಳಿಸಿದರೆ ಮತ್ತೊಬ್ಬ ಅರ್ಹ ಫಲಾನುಭವಿಗೆ ನೀಡಬಹುದಾಗಿದೆ. ಸರ್ಕಾರದ ಸವಲತ್ತುಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
೩೫ ಮಂದಿಗೆ ೭೫೦ ಲೀ. ನೀರಿನ ಟ್ಯಾಂಕ್, ೧೦ ಮಂದಿಗೆ ಮನೆ ದುರಸ್ತಿಗೆ ನೆರವು, ಐವರು ಅಂಗವಿಕಲರಿಗೆ ಗಾಲಿ ಕುರ್ಚಿ ಸೇರಿದಂತೆ ೫೦ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ವಹಿಸಿದ್ದರು. ಮುಖ್ಯಾಧಿಕಾರಿ ಕರುಣಾಕರ ವಿ. ಉಪಸ್ಥಿತರಿದ್ದರು.
"
ಸಾರ್ವಜನಿಕರು ಘನ ತ್ಯಾಜ್ಯವನ್ನು ವಿಂಗಡಣೆ ಮಾಡಿ ನೀಡಬೇಕು. ಹಸಿ ತ್ಯಾಜ್ಯ, ಪ್ಲಾಸ್ಟಿಕ್, ಪೇಪರ್ ತ್ಯಾಜ್ಯಗಳ ಜತೆಗೆ ವಿಶೇಷ ತ್ಯಾಜ್ಯವಾದ ಔಷಧಿ, ಕೀಟನಾಶಕ, ಬಾಡಿ ಸ್ಟ್ರೇ ಬಾಟಲಿಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕು. ಮೊಬೈಲ್ ತ್ಯಾಜ್ಯ, ಬ್ಯಾಟರಿ, ಸ್ಯಾನಿಟರಿ ತ್ಯಾಜ್ಯಗಳ ವಿಂಗಡಣೆಗೆ ಆದ್ಯತೆ ನೀಡಬೇಕು.
— ಕರುಣಾಕರ ವಿ. ವಿಟ್ಲ ಪಪಂ ಮುಖ್ಯಾಧಿಕಾರಿ