ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸ್ವಚ್ಛತೆಯ ಕರಪತ್ರವನ್ನು ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಬಿಡುಗಡೆ ಮಾಡಿದರು. ಅಶೋಕ್ ಕುಮಾರ್ ಶೆಟ್ಟಿ, ಸಂಗೀತಾ, ಕರುಣಾಕರ ಇದ್ದರು. 
ಜಿಲ್ಲೆ

ಸರ್ವಾನುಮತದ ನಿರ್ಣಯಕ್ಕಿಲ್ಲ ಬೆಲೆ VITTAL

ಪ್ರಮುಖ ಮುಖ್ಯಾಂಶಗಳು

  • ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ
ವಿಟ್ಲ: ಕಸ ಸಂಗ್ರಹ ವಿಚಾರ ಕುರಿತು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಒಮ್ಮೆ ನಿರ್ಯಣ ಮಾಡಲಾಗಿದೆ. ಜಾತ್ರೆ ಮತ್ತು ಸಂತೆಯ ಕಸದ ವಿಚಾರ ಒಂದೇ ಇರಬೇಕು. ಒಮ್ಮೆ ಟೆಂಡರ್ ಆಗಿ ನಿಬಂಧನೆಯನ್ನು ಹಾಕಿದ ಮೇಲೆ ಮತ್ತೆ ಟೆಂಡರ್ ಮಾಡುವುದು ಸರಿಯಲ್ಲ. ಸಂತೆಯ ಟೆಂಡರ್ ನೀಡುವಾಗ ಕಸ ತೆಗೆಯಬೇಕು ಎಂದ ಮೇಲೆ ಅದನ್ನು ಮತ್ತೆ ಚರ್ಚೆ ಮಾಡುವುದು ಸರಿಯಲ್ಲ. ನಿಬಂಧನೆಯನ್ನು ಪಾಲಿಸಲಾಗದಿದ್ದರೆ ಮರು ಟೆಂಡರ್ ಮಾಡಬೇಕು. ಪ್ರತಿ ಸಭೆಯಲ್ಲಿ ಹೊಸ ನಿಯಮಗಳನ್ನು ತಂದರೆ ಅದು ಸರಿಯಲ್ಲ. ಸರ್ವಾನುಮತದಿಂದ ಕೈಗೊಂಡ ನಿರ್ಣಯವನ್ನು ಬದಲಾಯಿಸಬಾರದು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.
ವಿಟ್ಲ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಸ ಸಂಗ್ರಹ ಕುರಿತು ಗಂಭೀರ ಚರ್ಚೆ ನಡೆಯಿತು.
ಮೇಗಿನಪೇಟೆಯಲ್ಲಿ ತ್ಯಾಜ್ಯವೆಲ್ಲ ರಸ್ತೆಯ ಬದಿಗೆ ಬರುತ್ತಿದ್ದು ತೆರವು ಮಾಡಬೇಕು. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಕಸ ಸಂಗ್ರಹ ವಾಹನಕ್ಕೆ ಟೋಯಿಂಗ್ ವ್ಯವಸ್ಥೆ ಮಾಡಿ ನಿಯಮ ಬಾಹಿರವಾಗಿ ಇಡುವ ವಾಹನವನ್ನು ತೆಗೆಯಬೇಕು. ಬೀದಿ ಬದಿ ತಳ್ಳುಗಾಡಿ ಇಡುವುದರಿಂದ ಮತ್ತೆ ಸಮಸ್ಯೆಯಾಗಲಿದ್ದು, ಈಗಲೇ ಎಚ್ಚರ ವಹಿಸಬೇಕು. ಚರಂಡಿಗಳ ಹೂಳೆತ್ತದಿದ್ದರೆ ಮಳೆಗಾಲದಲ್ಲಿ ನೀರೆಲ್ಲ ರಸ್ತೆ ಮೇಲೆ ಹರಿದು ಗಂಭೀರ ಸಮಸ್ಯೆ ಎದುರಾಗಲಿದೆ. ಅಧ್ಯಕ್ಷರ ವಿವೇಚನಡಿಯ ನಿಽಯಲ್ಲಿ ಹಣ ಮೀಸಲಿಟ್ಟು ತ್ವರಿತವಾಗಿ ಚರಂಡಿಗಳನ್ನು ದುರಸ್ತಿ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸಭೆಯ ಅಜೆಂಡಾವನ್ನು ಸದಸ್ಯರಿಗೆ ಒಂದು ವಾರದ ಮೊದಲು ನೀಡಿದಾಗ ಮಾತ್ರ ಅದಕ್ಕೆ ಸರಿಯಾದ ರೀತಿಯಲ್ಲಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತದೆ. ವಾಹನ ದುರಸ್ತಿಗೂ ತ್ವರಿತ ಕ್ರಮ ಯಾಕೆ ವಹಿಸುವುದಿಲ್ಲ. ಪಂಚಾಯಿತಿಯ ವಾಹನ ಎಲ್ಲಿದೆ ಎಂಬುದು ಅಽಕಾರಿಗಳಿಗೆ ಮಾಹಿತಿಯಿಲ್ಲ ಎಂದಾದರೆ ಹೇಗೆ? ೨ರಿಂದ ೫ ಸಾವಿರ ರೂ. ಒಳಗಿನ ಬಿಲ್ ಪಾವತಿಗೂ ಸಾಮಾನ್ಯ ಸಭೆಯವರೆಗೆ ಕಾಯದೆ ನೇರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ಸದಸ್ಯರಿಂದ ವ್ಯಕ್ತವಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಂಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಕರುಣಾಕರ ಇದ್ದರು. ಸ್ವಚ್ಛತೆಯ ಕರಪತ್ರವನ್ನು ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಬಿಡುಗಡೆ ಮಾಡಿದರು.

ಚುನಾಯಿತ ಸದಸ್ಯರ ಸಭೆ ಯಾಕೆ?

ಮುಖ್ಯಾಽಕಾರಿಗಳಿಗೆ ಬೇಕಾದ ಹಾಗೆ ನಿಯಮ, ನಿರ್ಣಯ ಮಾಡುವುದಾದರೆ, ಚುನಾಯಿತ ಸದಸ್ಯರನ್ನು ಕರೆದು ಸಭೆ ನಡೆಸುವ ಉದ್ದೇಶವೇನು? ಸಮಯ ವ್ಯರ್ಥ ಮಾಡುವುದಕ್ಕೆ ಸದಸ್ಯರು ಹಾಜರಾಗಿ ಕಾಟಾಚಾರಕ್ಕೆ ಸಾಮಾನ್ಯ ಸಭೆ ನಡೆಸುವುದಾ? ಸರ್ವಾನುಮತದ ತೀರ್ಮಾನ ಆದ ಮೇಲೆ ಮತ್ತೆ ಅದನ್ನು ತಿದ್ದುಪಡಿ ನಡೆಸುವುದು ಸರಿಯಲ್ಲ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು.

ನಾಲ್ಕು ಮಾರ್ಗದ ಸಿಸಿ ಕ್ಯಾಮರಾ ಅಕ್ರಮ

ಗ್ರಾಮ ಪಂಚಾಯಿತಿ ಇದ್ದಾಗ ನಾಲ್ಕು ಮಾರ್ಗದಲ್ಲಿ ವಾಹನ ತಿರುಗಲು ಸಮಸ್ಯೆಯಾಗುವ ಕಾರಣ ಅಂಗಡಿಗಳಿಗೆ ಪರಿಹಾರ ನೀಡಿ ಜಾಗ ಪಡೆಯಲಾಗಿತ್ತು. ಅಲ್ಲಿ ಪೊಲೀಸ್ ಇಲಾಖೆ ಸಿಸಿ ಕ್ಯಾಮರಾ ಹಾಕಿರುವುದು ಸರಿಯಲ್ಲ. ಅದಕ್ಕೆ ಪಂಚಾಯಿತಿಯಿಂದ ಯಾವುದೇ ಒಪ್ಪಿಗೆಯನ್ನೂ ಪಡೆದಿಲ್ಲ. ಇಲ್ಲಿ ಈಗಾಗಲೇ ಲಾರಿ ಡಿಕ್ಕಿಯಾಗಿದ್ದು, ಅಪಾಯ ಸಂಭವಿಸುವ ಮೊದಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಂಬವನ್ನು ಬದಿಯಲ್ಲಿ ಹಾಕಿ ಪೈಪ್ ಅಳವಡಿಸಿ ಸಿಸಿ ಕ್ಯಾಮರಾ ಹಾಕುವುದಕ್ಕೆ ಯಾವುದೇ ಅಡ್ಡಿಯಿಲ್ಲ. ನಾಲ್ಕು ಮಾರ್ಗದಲ್ಲಿ ಹಾಕಿದ ಹಾಗೂ ಖಾಸಗಿಯವರು ಸಾರ್ವಜನಿಕ ಸ್ಥಳದಲ್ಲಿ ಹಾಕಿದ ಸಿಸಿ ಕ್ಯಾಮರಾ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
"

ವಾಹನ ಚಾಲಕರು ಸದಸ್ಯರಲ್ಲಿ ಸಮಸ್ಯೆ ಹೇಳುವ ಬದಲು ಪಂಚಾಯಿತಿಯ ಗಮನಕ್ಕೆ ತಹಬೇಕು. ನ್ಯಾಯಾಲಯದ ಸೂಚನೆಯಂತೆ ಘನ ತ್ಯಾಜ್ಯ ಸಂಗ್ರಹ ಕಾರ್ಯ ಪರಿಣಾಮಕಾರಿಯಾಗಿ ನಿರ್ವಹಿಸಬೇಕು.

— ಕರುಣಾಕರ ವಿ. ಮುಖ್ಯಾಧಿಕಾರಿ


"

ಪಂಚಾಯಿತಿ ಸೂಚನೆಯಂತೆ ಕಸವನ್ನು ಬೇರ್ಪಡಿಸಿ ಇಟ್ಟರೂ ನಮ್ಮ ವಾರ್ಡ್‌ಗೆ ವಾಹನವೇ ಬರುವುದಿಲ್ಲ. ಕಸ ಸಂಗ್ರಹಣೆಗೆ ಹಣ ಪಡೆಯುತ್ತಾರೆ ಎಂದು ಗ್ರಾಮಸ್ಥರು ನಮ್ಮಲ್ಲಿ ದೂರು ಹೇಳುತ್ತಾರೆ. ಪಂಚಾಯಿತಿ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.

— ಪದ್ಮಿನಿ, ವಿಟ್ಲ ಪಪಂ ಸದಸ್ಯೆ