ಉಪ್ಪಿನಂಗಡಿಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಸಂಘದ ನೂತನ 5ನೇ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್‌ ದೀಪ ಪ್ರಜ್ವಲಿಸಿದರು. ಸಂಜೀವ ಮಠಂದೂರು, ಕೆ.ವಿ.ಪ್ರಸಾದ್‌, ಕೆ.ರಾಜೇಶ್‌ ನಾಯಕ್‌, ಎಚ್‌.ಜಗನ್ನಾಥ ಸಾಲ್ಯಾನ್‌ ಇತರರು ಇದ್ದರು. 
ಜಿಲ್ಲೆ

ಜನರ ವಿಶ್ವಾಸ ಗಳಿಸಿದ ಸಹಕಾರಿ ಕ್ಷೇತ್ರ VITTAL

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಪ್ರತಾಪಸಿಂಹ ನಾಯಕ್‌ ಶ್ಲಾಘನೆ
  • ವಿಟ್ಲ ಗ್ರಾಮೀಣ ಬ್ಯಾಂಕ್‌ 5ನೇ ಶಾಖೆ ಉದ್ಘಾಟನೆ
ಪುತ್ತೂರು: ಒಳ್ಳೆಯ ಸೇವೆ, ಸಂಬಂಧ ಇರುವಲ್ಲಿ ಒಳ್ಳೆಯ ವ್ಯವಹಾರವಿರುತ್ತದೆ. ಸಹಕಾರಿಗೆ ಎಲ್ಲರ ಸಹಕಾರ ಲಭಿಸಿದಾಗ ಉತ್ತಮವಾಗಿ ಮುನ್ನಡೆಯುತ್ತದೆ. ಜನರ ವಿಶ್ವಾಸವನ್ನು ಸಹಕಾರಿ ಕ್ಷೇತ್ರ ಪಡೆದುಕೊಂಡಿದೆ. ಜನರ ಅಗತ್ಯದ ಸಂದರ್ಭದಲ್ಲಿ ಸಹಕಾರಕ್ಕೆ ಬರುವವರೇ ನಿಜವಾದ ಸಹಕಾರಿಗಳು. ಇದು ಸಹಕಾರಿ ಕ್ಷೇತ್ರ ದೇಶದ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್‌ ಹೇಳಿದರು.
ಶನಿವಾರ ಉಪ್ಪಿನಂಗಡಿ ಗಾಂ˜ಪಾರ್ಕ್‌ ರಾಮಗೋಪಾಲ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಸಂಘದ ನೂತನ 5ನೇ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು.
ಭದ್ರತಾ ಕೊಠಡಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರ ಸಹಕಾರದ ಉದ್ದೇಶವಾಗಿದೆ. ಆರ್ಥಿಕ ಶಿಸ್ತು ಹಾಗೂ ಸಿಬ್ಬಂದಿ ಸೇವೆಯಿಂದ ಸಹಕಾರ ಸಂಘ ವ್ಯಾಪಕವಾಗುತ್ತಿದೆ. ಸಹಕಾರ ಸಂಘ ರಾಷ್ಟ್ರೀಕೃತ ಬ್ಯಾಂಕ್‌ಗೆ ಪೈಪೋಟಿ ನೀಡುವ ಹಂತಕ್ಕೆ ತಲುಪಿದೆ. ಠೇವಣಿ ಇಡುವವರಷ್ಟೇ ಸಾಲಗಾರರು ಕೂಡ ಸಹಕಾರಿಗೆ ಬಹಳ ಮುಖ್ಯ ಎಂದರು.
ಸಹಕಾರ ಭಾರತಿ ಉಪಾಧ್ಯಕ್ಷ ಕೆ.ವಿ.ಪ್ರಸಾದ್‌ ಗಣಕೀಕರಣ ವ್ಯವಸ್ಥೆಯನ್ನು ಉದ್ಘಾಟಿಸಿದರು. ನೂತನ ಕಚೇರಿಯ ಕೆಲಸ ಕಾರ್ಯದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.
ಕಟ್ಟಡದ ಮಾಲೀಕ ಕೆ.ರಾಜೇಶ್‌ ನಾಯಕ್‌, ನಿರ್ದೇಶಕರಾದ ಜಯಂತಿ ಎಚ್‌.ರಾವ್‌, ಶುಭಲಕ್ಷ್ಮೀ, ದಯಾನಂದ ಆಳ್ವ, ಪೂವಪ್ಪ ಎಸ್‌., ದಿವಾಕರ ವಿ., ಕೇಶವ ಎಂ., ಗೋವರ್ಧನ ಕುಮಾರ್‌ ಐ., ಭಾಸ್ಕರ ಶೆಟ್ಟಿ ವಿ., ವಿಶ್ವನಾಥ ಎಂ., ತಿರುಮಲೇಶ್ವರ ಭಟ್‌ ಪಿ., ಸತೀಶ್‌ ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್‌ ಕೆ. ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಮೋಹನ್‌ ಕೆ.ಎಸ್‌. ಸ್ವಾಗತಿಸಿದರು. ಉಪಾಧ್ಯಕ್ಷ ಮನೋರಂಜನ್‌ ಕೆ.ಆರ್‌. ವಂದಿಸಿದರು. ಮಹೇಶ್‌ ಎಂ. ಕಾರ್ಯಕ್ರಮ ನಿರೂಪಿಸಿದರು.
"

ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಬ್ಯಾಂಕಿಂಗ್‌ ಸೌಲಭ್ಯದೊಂದಿಗೆ ಪಾರದರ್ಶಕ ಹಾಗೂ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಉಜಿರೆಯಲ್ಲಿ ಶಾಖೆ ಸ್ಥಾಪನೆ ಹಾಗೂ ವಿಟ್ಲ ಗೋದಾಮು, ಮುಖ್ಯ ಕಚೇರಿ ನಿರ್ಮಾಣದ ಕನಸು ಆಡಳಿತ ಮಂಡಳಿಯ ಮುಂದಿದೆ. ಮುಂದಿನ ಮಹಾಸಭೆಯ ನಿರ್ಣಯದಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು.

— ಎಚ್‌.ಜಗನ್ನಾಥ ಸಾಲಿಯಾನ್‌, ಅಧ್ಯಕ್ಷರು, ವಿಟ್ಲ ಗ್ರಾಮೀಣ ಸಹಕಾರಿ ಸಂಘ