ಮುರುವ ಮಹಾಬಲ ಭಟ್ 
ಜಿಲ್ಲೆ

ವಿಟ್ಲದಲ್ಲಿ ರಸ್ತೆ ಅಗಲೀಕರಣ ಅಗತ್ಯ VITTAL

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಮುರುವ ಮಹಾಬಲ ಭಟ್ ಆಗ್ರಹ
ವಿಟ್ಲ: ಕಲ್ಲಡ್ಕ- ಸಾರಡ್ಕ ರಸ್ತೆ ಅಗಲೀಕರಣದ ವಿಚಾರದಲ್ಲಿ ಮಾನವಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ. ಈ ಬಗ್ಗೆ ಪುತ್ತೂರು ಹಾಗೂ ಬಂಟ್ವಾಳ ತಾಲೂಕುಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಗಡಿ ಅಳತೆಗೆ ಸೂಚನೆ ನೀಡಲಾಗಿದ್ದು ತಹಸೀಲ್ದಾರ್ ಕಚೇರಿ, ಸರ್ವೇ ಇಲಾಖೆಯಿಂದ ಗಡಿ ಅಳತೆ ಕೆಲಸ ನಡೆಯಬೇಕಾಗಿದೆ. ಈಗಾಗಲೇ ಕಚೇರಿಗಳಿಗೆ ತೆರಳಿ ಈ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ರೈತ ಸಂಘದ ಗೌರವಾಧ್ಯಕ್ಷ ಮುರುವ ಮಹಾಬಲ ಭಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಟ್ಲದಲ್ಲಿ ಸುವ್ಯವಸ್ಥೆ ರಸ್ತೆ ನಿರ್ಮಾಣವಾಗಿ ಸಾರ್ವಜನಿಕರಿಗೆ ಆಗುವ ತೊಂದರೆ ನಿವಾರಣೆ ಮಾಡಬೇಕು. ವಿಟ್ಲದಲ್ಲಿ ಚರಂಡಿಯೂ ಇಲ್ಲ, ಪಾದಚಾರಿಗಳಿಗೆ ಫುಟ್‌ಪಾತ್ ವ್ಯವಸ್ಥೆಯಿಲ್ಲ. ರಸ್ತೆಯ ಬದಿಯ ಜಮೀನುಗಳ ಬಗ್ಗೆ ಸರ್ವೇ ಆಗಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ೪೦ ಮೀ. ಜಾಗದ ಅಗತ್ಯವಿದ್ದು, ಸ್ವಾಧೀನ ಕಾರ್ಯ ನಡೆಯಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ವಿಟ್ಲದಲ್ಲಿ ರಸ್ತೆ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕೇ ಹೊರತು ವಿರೋಧಿಸುವುದು ಸರಿಯಲ್ಲ. ರಿಂಗ್ ರೋಡ್ ಮಾಡಿದರೆ ರೈತರ ಭೂಮಿ ಹಾಗೂ ಪರಿಸರಕ್ಕೆ ಹಾನಿಯಾಗುತ್ತದೆ. ಹಲವು ಮನೆಗಳಿಗೂ ಸಮಸ್ಯೆಯಾಗುತ್ತದೆ. ಸರ್ಕಾರಕ್ಕೆ ಪರಿಹಾರ ವಿತರಣೆಯೂ ಹೊರೆಯಾಗಿ ಪರಿಣಮಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಮಣ್ಣ ಪಾಳಿಗೆ, ರಾಜೀವ ಗೌಡ, ಅಣ್ಣು ಗೌಡ ಇದ್ದರು.