ಪಿಎಂಶ್ರೀ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಸಂಸದ ಕ್ಯಾ. ಬ್ರಿಶೇಷ್ ಚೌಟ ಉದ್ಘಾಟಿಸಿದರು. ಅಶೋಕ್ ಕುಮಾರ್ ರೈ, ಕರುಣಾಕರ ನಾಯ್ತೊಟ್ಟು, ಅಶೋಕ್ ಕುಮಾರ್ ಶೆಟ್ಟಿ, ಸಂಗೀತಾ ಪಾಣೆಮಜಲು, ರವಿಪ್ರಕಾಶ್ ವಿಟ್ಲ ಇತರರು ಇದ್ದರು.
- ಶಾಸಕ ಅಶೋಕ್ ಕುಮಾರ್ ರೈ ಆಶಯ
- ನೂತನ ಕೊಠಡಿಗಳ ಉದ್ಘಾಟನೆ
ವಿಟ್ಲ: ಸರ್ಕಾರಿ ಶಾಲೆಗಳಿಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿದ್ದು, ಜನರು ಬಳಸಿಕೊಳ್ಳಲು ಮುಂದಾಗಬೇಕು. ಶಿಕ್ಷಣ ಪಡೆದರೆ ಜನಪ್ರತಿನಿ˜ಗಳಿಗೆ ಜನರ ಹಾದಿ ತಪ್ಪಿಸಲು ಆಗುವುದಿಲ್ಲ. ತಾಲೂಕಿಗೆ ನಾಲ್ಕು ಕೆಪಿಎಸ್ ಮಾದರಿ ಶಾಲೆಗಳು ಬಂದಿದ್ದು, ಪ್ರತಿ ಗ್ರಾಮಕ್ಕೆ ಬರಬೇಕಾಗಿದೆ. ಈ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ದೇಶ ಉದ್ಧಾರ ಆಗಲು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷ ಬೇಕಾಗಿದೆ. ಸರ್ಕಾರಿ ಕೆಲಸ ಪಡೆಯಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ವಿಟ್ಲ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸದ ಕ್ಯಾ.ಬ್ರಿಶೇಷ್ ಚೌಟ ಎನ್‌ಎಂಪಿಎ ವತಿಯಿಂದ ನಿರ್ಮಾಣಗೊಂಡ ಪಿಎಂಶ್ರೀ ಪ್ರಾಥಮಿಕ ಶಾಲೆಯ 3 ಕೊಠಡಿಗಳನ್ನು ಹಾಗೂ ಮೋನಪ್ಪ ಶೆಟ್ಟಿ ಕೊಡುಗೆಯಾಗಿ ನಿರ್ಮಿಸಿದ ಕೊಠಡಿಯನ್ನು ಉದ್ಘಾಟಿಸಿದರು. ದಾನಿಗಳಾದ ಮೋನಪ್ಪ ಶೆಟ್ಟಿ, ವಿ.ಕೆ.ಸಂತೋಷ್ ಕುಮಾರ್, ಶಶಿಕಾಂತ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸ್ಥಾಯಿ ಸಮಿತಿಯ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸದಸ್ಯ ರವಿಪ್ರಕಾಶ್ ವಿಟ್ಲ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಮಾನಾಥ ವಿಟ್ಲ, ಪ್ರಾಂಶುಪಾಲ ಸುಧೀರ್ ಕುಮಾರ್, ಹಳೇ ವಿದ್ಯಾರ್ಥಿ ಸುಬ್ರಾಯ ಪೈ, ಸಮನ್ವಯಾ˜ಕಾರಿ ವಿದ್ಯಾ., ಸಮೂಹ ಸಂಪನ್ಮೂಲ ವ್ಯಕ್ತಿ ಬಿಂದು ಬಿ.ಜೆ. ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ವಾರಿಜಾ ಬಿ.ಎ. ಸ್ವಾಗತಿಸಿದರು. ಸಹಶಿಕ್ಷಕಿ ಅರುಣಾ ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ಕಾರ್ಯಕ್ರಮ ನಿರೂಪಿಸಿದರು.