ವಿಟ್ಲ: ಪಳಿಕೆ ರಂಗರಮಜಲು ಎಂಬಲ್ಲಿ ಕ್ಷಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ತಂಡ ಹಲ್ಲೆ ಮಾಡುತ್ತಿದ್ದುದನ್ನು ಗಮನಿಸಿ ಬಿಡಿಸಲು ಹೋದವರನ್ನು ತಳ್ಳಿ ನೆಲಕ್ಕೆ ಬೀಳಿಸಿದ್ದು, ಇಬ್ಬರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಳಿಕೆ ರಂಗರಮಜಲು ನಿವಾಸಿ ಭವಿತ್ ಪೂಜಾರಿ (28) ಹಲ್ಲೆಗೊಳಗಾದವರಾಗಿದ್ದಾರೆ. ರಂಗರಮಜಲು ನಿವಾಸಿ ರಾಮಣ್ಣ ಶೆಟ್ಟಿ (70) ಅವರನ್ನು ತಳ್ಳಿ ಘಾಯಗೊಳಿಸಿದ್ದಾರೆ.
ಮನೆಯೊಂದರ ಆವರಣದಲ್ಲಿ ಕೋಳಿ ಸಿಕ್ಕಿ ಹಾಕಿಕೊಂಡಿದ್ದನ್ನು ಗಮನಿಸಿದ ಭವಿತ್ ಬಿಡಿಸಿ ಕಳುಹಿಸಿದ್ದಾರೆ. ಆ ಬಳಿಕ ರಸ್ತೆಯಲ್ಲಿ ನಾಯಿಗಳು ಅದನ್ನು ಓಡಿಸುತ್ತಿರುವುದನ್ನು ಹೇಳಿದ್ದಕ್ಕೆ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಹಲ್ಲೆ ನಡೆಯುತ್ತಿದ್ದ ಸಂದರ್ಭ ಬಿಡಿಸಲು ಹೋದ ಮನೆಯ ಮಾಲೀಕರನ್ನೂ ತಳ್ಳಿ ನೆಲಕ್ಕೆ ಬೀಳಿಸಿ ಗಾಯಗೊಳಿಸಲಾಗಿದೆ.