ಜಿಲ್ಲೆ

ವಿಟ್ಲ ವಿಧಾನಸಭಾ ಕ್ಷೇತ್ರವಾಗಲಿ - ಗ್ರಾಪಂ ಮಾಜಿ ಅಧ್ಯಕ್ಷ ರಮಾನಾಥ ಆಗ್ರಹ

Mangaluru - Nishantha Narayana


ವಿಟ್ಲ: ದಶಕಗಳ ಹಿಂದೆ ವಿಧಾನಸಭಾ ಕ್ಷೇತ್ರದ ಪುನರ್ವಿಂಗಡನೆಯ ಸಂದರ್ಭ ವಿಟ್ಲ ವಿಧಾನಸಭಾ ಕ್ಷೇತ್ರ ಅಸ್ತಿತ್ವ ಕಳೆದುಕೊಂಡು ಮರೆಯಾಗಿದ್ದು, ವಿಟ್ಲ ಪ್ರದೇಶದ ಮತದಾರರಿಗೆ ಮಾಡಿದ ಘೋರ ಅನ್ಯಾಯವಾಗಿದೆ. ವಿಟ್ಲ ನಗರ ತಾಲೂಕು ಕೇಂದ್ರವಾಗಿ ಈ ಪ್ರದೇಶದ ನಾಗರಿಕರಿಗೆ ಸರ್ಕಾರಿ ಸೌಲಭ್ಯಗಳು ಸುಲಭವಾಗಿ ಹಂಚಿಕೆ ಆಗಬೇಕಿತ್ತು. ವಿಟ್ಲ ವಿಧಾನಸಭಾ ಕ್ಷೇತ್ರದ ಕೆಲ ಗ್ರಾಮಗಳು ಬಂಟ್ವಾಳ ವಿಧಾನ ಸಭಾ ಮತ್ತು ಇನ್ನು ಕೆಲವು ಪ್ರದೇಶಗಳು ಪುತ್ತೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿಹೋಗಿ ಇಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆ ಆಗಿದೆ. ರಾಜಕೀಯವಾಗಿ ವಿಕೇಂದ್ರೀಕರಣದಿಂದ ಲಾಭಪಡೆಯಬೇಕಾದ ಈ ಭಾಗದ ಜನತೆ, ಶಾಸಕರಿಲ್ಲದೆ ತಮ್ಮ ಸಮಸ್ಯೆಗಳನ್ನು ಸಮರ್ಥವಾಗಿ ಪ್ರತಿನಿಽಸುವ ಅವಕಾಶದಿಂದ ವಂಚಿತವಾಗಿದ್ದಾರೆ. ಪುನರ್ವಿಂಗಡಣೆ ಸಮಯ ವಿಟ್ಲವನ್ನು ಮತ್ತೊಮ್ಮೆ ವಿಧಾನಸಭಾ ಕ್ಷೇತ್ರವಾಗಿಸಬೇಕು ಎಂದು ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಆಗ್ರಹಿಸಿದ್ದಾರೆ.