ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಸಿಸಿ ಕ್ಯಾಮರಾ ಹಾಕಲು ಕಂಬ ಅಳಡಿಸಿರುವುದು.  
ಜಿಲ್ಲೆ

ಕಾನೂನು ಪಾಲನೆಗೆ ಸಿಸಿ ಕಣ್ಗಾವಲು Vittal

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ವಿಟ್ಲ ಜಂಕ್ಷನ್ ೪ ಕಡೆ ಅಳವಡಿಕೆ
  • ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ
ವಿಟ್ಲ: ಪೇಟೆಯಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಕಾನೂನು ಉಲ್ಲಂಸಿ ವಾಹನ ಚಲಾಯಿಸುವರೇ ಹೆಚ್ಚಾಗಿದ್ದಾರೆ. ಪೊಲೀಸರು ದಂಡ ವಿಧಿಸಲು ಮುಂದಾರೆ ಪ್ರಭಾವಗಳನ್ನು ಬಳಸಿ ನುಣುಚಿಕೊಳ್ಳುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕೇರಳ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಸಿಸಿ ಕ್ಯಾಮರಾಗಳನ್ನು ಅಳಡಿಸಲು ಮುಂದಾಗಿದ್ದು ಕಾನೂನು ಉಲ್ಲಂಸುವವರ ಮೇಲೆ ಕ್ಯಾಮರಾ ಕಾಣ್ಗಾವಲಿಡಲಿದೆ.
ಕೇರಳ ಗಡಿಯಲ್ಲಿರುವ ವಿಟ್ಲದಲ್ಲಿ ನಿತ್ಯವೂ ಹೆಲ್ಮೆಟ್ ಧರಿಸದೆ, ಸೀಟ್‌ಬೆಲ್ಟ್ ಹಾಕದೆ ವಾಹನ ಚಲಾಯಿಸುವವ ಸಂಖ್ಯೆ ಹೆಚ್ಚಿದೆ. ಪೊಲೀಸರು ಕಾನೂನು ಪಾಲನೆಗೆ ನಿತ್ಯ ನಿಲ್ಲಲು ಸಿಬ್ಬಂದಿ ಕೊರತೆಯೂ ಕಾರಣವಾಗಿದೆ. ಈ ಎಲ್ಲ ಕಾರಣದಿಂದ ಹೈ ಎಂಡ್ ಕ್ಯಾಮರಾಗಳ ಅಳವಡಿಕೆಗೆ ಜಾಗ ಗುರುತು ಮಾಡಲಾಗುತ್ತಿದೆ.
ಟರ್ನ್‌ಗೆ ಸಮಸ್ಯೆ ಸಾಧ್ಯತೆ: ನಾಲ್ಕು ಮಾರ್ಗದ ಜಂಕ್ಷನ್‌ನಲ್ಲಿ ಪ್ರಸ್ತುತ ವಾಹನ ತಿರುವುದಕ್ಕೆ ಕಷ್ಟಪಡುವ ಸ್ಥಿತಿಯಿದೆ. ಈಗ ಸರ್ಕಾರ ಜಾಗವನ್ನು ಸ್ವಾಧೀನ ಮಾಡಿದ ಸ್ಥಳದಲ್ಲೇ ಸಿಸಿ ಕ್ಯಾಮರಾ ಕಂಬ ಅಳವಡಿಕೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಇದು ಭವಿಷ್ಯದಲ್ಲಿ ಸಾಲೆತ್ತೂರು ರಸ್ತೆಯಿಂದ ಮಂಗಳೂರು ರಸ್ತೆಗೆ ವಾಹನ ತಿರುವುದಕ್ಕೆ ಸಮಸ್ಯೆಯಾಗಿ ಕಾಡಲಿದೆ. ಇಲಾಖೆ ಇದನ್ನು ಈಗಲೇ ಸರಿಪಡಿಸಬೇಕೆಂಬ ಮಾತು ಕೇಳಿ ಬರುತ್ತಿದೆ.
ಇಂಜಿನಿಯರ್ ಸೂಚಿಸಿದ ಜಾಗ!: ನಾಲ್ಕು ರಸ್ತೆಗಳು ಸರಿಯಾಗಿ ಕಾಣಬೇಕೆಂಬ ನಿಟ್ಟಿನಲ್ಲಿ ಪೊಲೀಸ್ ಚೌಕಿ ಇದ್ದ ಸ್ಥಳದಲ್ಲೇ ಈಗ ಸಿಸಿ ಕ್ಯಾಮರಾ ಕಂಬ ಅಳವಡಿಸಲಾಗುತ್ತಿದೆ. ಈ ಬಗ್ಗೆ ಸಿಸಿಟಿವಿ ಅಳವಡಿಸಲು ಇಂಜಿನಿಯರ್‌ಗಳು ಪರಿಶೀಲನೆ ನಡೆಸಿದ್ದು, ರಸ್ತೆಯ ಅಂಚಿನಲ್ಲೇ ಅವರು ಜಾಗ ಗುರುತು ಮಾಡಿದ್ದಾರೆ. ಅದರ ಪ್ರಕಾರ ಕಾಮಗಾರಿ ನಡೆಯುತ್ತಿದೆ ಎಂದು ಇಲಾಖೆ ಅಽಕಾರಿಗಳು ತಿಳಿಸಿದ್ದಾರೆ.

ಭೂಸ್ವಾಧೀನ ಮಾಡಿದ ಜಾಗದಲ್ಲೇ ಕ್ಯಾಮರಾ

ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಾಹನಗಳು ತಿರುಗುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ನಾಲ್ಕು ಅಂಗಡಿಗಳನ್ನು ಭೂಸ್ವಾಧೀನ ಮೂಲಕ ತೆರವು ಮಾಡಲಾಗಿತ್ತು. ಕೆಲವು ಸಮಯ ಕಳೆಯುತ್ತಿದ್ದಂತೆ ಇಲ್ಲಿ ವಾಹನ ನಿಲುಗಡೆ ಪ್ರಾರಂಭವಾಗಿತ್ತು. ಬಳಿಕ ಬ್ಯಾನರ್ ಕಾಟ ಶುರುವಾಗಿತ್ತು. ಈಗ ಕ್ಯಾಮರಾ ಕಂಬಗಳನ್ನು ಅಳವಡಿಸಲಾಗುತ್ತಿದ್ದು ವಾಹನ ಸಂಚಾರಕ್ಕೆ ಮತ್ತೆ ಅನನುಕೂಲವಾಗಲಿದೆ ಎಂಬ ದೂರು ಕೇಳಿ ಬರುತ್ತಿದೆ.

ಮನೆಗೆ ಬರಲಿದೆ ನೋಟಿಸ್

ಕೇರಳದಲ್ಲಿ ಕೆಲವು ವರ್ಷಗಳಿಂದ ಸೀಟ್ ಬೆಲ್ಟ್ ಹಾಕದ, ಹೆಲ್ಮೆಟ್ ಧರಿಸದೆ ವಾಹನ ಸಂಚರಿಸಿ ಸಂಚಾರ ನಿಯಮ ಉಲ್ಲಂಸುವ ಸವಾರರ ಗುಣಮಟ್ಟದ ಚಿತ್ರ ಸಹಿತವಾದ ನೋಟಿಸ್‌ನ್ನು ನೋಂದಾಯಿತ ಮೊಬೈಲ್ ಹಾಗೂ ವಾಹನ ಖರೀದಿ ಸಮಯ ನೀಡಿದ ವಿಳಾಸಕ್ಕೆ ಕಳುಹಿಸಲಾಗುತ್ತಿತ್ತು. ಇದೇ ಮಾದರಿಯಲ್ಲಿ ವಿಟ್ಲದಲ್ಲೂ ಕಾನೂನು ಉಲ್ಲಘಿಸಿದವರಿಗೆ ಮನೆಗೆ ನೋಟಿಸ್ ಬರಲಿದೆ.
"

ರಸ್ತೆಯ ಬದಿಯಲ್ಲಿ ಪೊಲೀಸ್ ಇಲಾಖೆ ಸಿಸಿ ಕ್ಯಾಮರಾ ಕಂಬ ಅಳವಡಿಸಿ ಭೂಸ್ವಾಧೀನ ಮಾಡಿದ ಜಾಗವನ್ನು ನಿರುಪಯುಕ್ತವಾಗಿಸಿದೆ. ಸಾಲೆತ್ತೂರು ರಸ್ತೆಯಿಂದ ವಾಹನ ತಿರುವುದಕ್ಕೆ ಸಮಸ್ಯೆಯಾಗಲಿದೆ.

— ಹಮೀದ್, ವಾಹನ ಸವಾರ