ಜಿಲ್ಲೆ

ಸೊಪ್ಪು ಬಳಕೆಯಿಂದ ಸಿಗಲಿದೆ ಜೀವಸತ್ವ

ಮರಿದೇವ ಹೂಗಾರ

ಹುಬ್ಬಳ್ಳಿ: ಸಹಜ ಸಮೃದ್ಧ ಸಂಸ್ಥೆ, ಓಯಾಸಿಸ್ ಮಾಲ್ ಹಾಗೂ ಜಿಐಜಡ್ ಜರ್ಮನ್ ಸಹಯೋಗದಲ್ಲಿ ಇಲ್ಲಿಯ ಓಯಾಸಿಸ್ ಮಾರ್ಲ್‌ನಲ್ಲಿ ಶನಿವಾರ ಸೊಪ್ಪು ಮೇಳ ಏರ್ಪಡಿಸಲಾಗಿತ್ತು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ. ರವಿ .ವೈ., ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಬಾಪೂಗೌಡ ಬಿರಾದಾರ ಉದ್ಘಾಟಿಸಿದರು.

ಡಾ. ರವಿ .ವೈ. ಮಾತನಾಡಿ, ಶೇ. 40ರಿಂದ 60ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಯುವಜನತೆ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿ ಮರೆತಿದ್ದಾರೆ. ಜಂಕ್‌ಫುಡ್ ದಾಸರಾಗಿದ್ದಾರೆ. ಇದರ ಪರಿಣಾಮ 25ರಿಂದ 30 ವರ್ಷದೊಳಗಿನ ಯುವ ಜನತೆಗೆ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಸೊಪ್ಪು ಬಳಸುವುದರಿಂದ ಪೋಷಕಾಂಶ, ಜೀವಸತ್ವ ಸಿಗುತ್ತದೆ ಎಂದರು.

ಬಾಪೂಗೌಡ ಬಿರಾದಾರ ಮಾತನಾಡಿದರು.

ರೈತ ಮಹಿಳೆ ಪ್ರೇಮಾ ಲೋಕುಂಡೆ, ಪ್ರಗತಿಪರ ರೈತ ವೀರನಗೌಡ ಪಾಟೀಲ, ಸಹಜ ಸಮೃದ್ಧ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.