ಜಿಲ್ಲೆ

ವಿಶ್ವೇಶ್ವರಯ್ಯ ನವಭಾರತ ನಿರ್ಮಾಣದ ಶಿಲ್ಪಿ

Davangere - Desk - Mahesh Babu E

ಹೊಳಲ್ಕೆರೆ: ಕೈಗಾರಿಕೆ, ನೀರಾವರಿ ಕ್ಷೇತ್ರದಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ನವಭಾರತ ನಿರ್ಮಾಣದ ಶಿಲ್ಪಿಯಾಗಿ ವಿಶ್ವೇಶ್ವರಯ್ಯ ಕಾರ್ಯನಿರ್ವಹಿಸಿದ್ದರು ಎಂದು ಸಿಪಿಐ ಮಾರ್ತಾಂಡಪ್ಪ ಬಿ.ಚಿಕ್ಕಣ್ಣ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪಟ್ಟಣದ ಎಂ.ಎಂ.ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಜಿನಿಯರ್‌ಗಳಿಗೆ ಸನ್ಮಾನಿಸಿ ಮಾತನಾಡಿದರು.

ತಹಸೀಲ್ದಾರ್ ಬಿ.ಬಿ.ಪಾತೀಮಾ ಮಾತನಾಡಿದರು. ಪರಿಷತ್ ತಾಲೂಕಾಧ್ಯಕ್ಷ ಎನ್.ಶಿವಮೂರ್ತಿ, ಸಹ ಪ್ರಾಧ್ಯಾಪಕ ಇ.ಮಹಾಲಿಂಗಪ್ಪ, ಸಿದ್ದವ್ವನಹಳ್ಳಿ ವಿರೇಶ್‌ಕುವರ್, ಗೋವಿಂದ ನಾಯ್ಕ, ಜಿ.ಎ.ದೇವರಾಜಯ್ಯ, ಆರ್.ಅಣ್ಣಪ್ಪ, ಪಾವಗಡ ಶಿವಣ್ಣ, ಕಾಂತರಾಜ್, ನೀಲಕಂಠ, ರಾಮಚಂದ್ರಪ್ಪ, ಶಿವಕುಮಾರ್, ಕಾಲಭೈರವ ಗಿರೀಶ್, ಮಂಜುನಾಥ, ಹರೀಶ್ ಉಪಸ್ಥಿತರಿದ್ದರು.