ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ಶಿಶು ಪಾಲನಾ ಕೇಂದ್ರಕ್ಕೆ ತಾಪಂ ಸಹಾಯಕ ನಿರ್ದೇಶಕ ಆಲಂಬಾಷಾ ಭೇಟಿ ನೀಡಿ, ಪರಿಶೀಲಿಸಿದರು. ಐಇಸಿ ಸಂಯೋಜಕ ಥಾಮಸ್, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಪ್ರತಿನಿಧಿ ಧನ್ಯಾ ಇದ್ದರು. 
ಜಿಲ್ಲೆ

ಶಿಶು ಪಾಲನಾ ಕೇಂದ್ರಗಳಿಗೆ ತಾಪಂ ಎಡಿ ಭೇಟಿ

ಸಿಂಧನೂರು: ತಾಲೂಕಿನ ಎಲೆಕೂಡ್ಲಿಗಿ, ಪಗಡದಿನ್ನಿ ಹಾಗೂ ಬೂತಲದಿನ್ನಿ ಗ್ರಾಪಂ ವ್ಯಾಪ್ತಿಯ ಶಿಶು ಪಾಲನಾ ಕೇಂದ್ರಗಳಿಗೆ ತಾಪಂ ಸಹಾಯಕ ನಿರ್ದೇಶಕ ಆಲಂಬಾಷಾ ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿದರು.

ಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ನಿಯಮದಂತೆ ಮಕ್ಕಳಿಗೆ ಆಹಾರ ನೀಡಬೇಕು. ವರ್ಷವಿಡೀ ಶಿಶುಪಾಲನಾ ಕೇಂದ್ರ ತೆರೆದಿರಬೇಕು. ಆಹಾರದಲ್ಲಿ ದೋಷವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಲಂಬಾಷಾ ಸೂಚಿಸಿದರು.

ಪಿಡಿಒಗಳಾದ ಮಹಾಂತೇಶ, ಲಿಂಗಪ್ಪ, ಐಇಸಿ ಸಂಯೋಜಕ ಥಾಮಸ್, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಪ್ರತಿನಿಧಿ ಧನ್ಯಾ ಇತರರಿದ್ದರು.