ಕೋಲಾರ: ತಾಲೂಕಿನ ತೊರದೇವಂಡಹಳ್ಳಿ ಶ್ರೀ ಚೌಡೇಶ್ವರಿ ದೇವಾಲಯದ ಬೀಗ ಮುರಿದು ಕಳ್ಳರು ದೇವರ ಒಡವೆಗಳನ್ನು ದೋಚಿ ಪರಾರಿಯಾಗಿದ್ದು, ಗ್ರಾಮಸ್ಥರು ಸೋಮವಾರ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಭಾನುವಾರ ರಾತ್ರಿ ಗ್ರಹಣದ ವೇಳೆ ದೇಗುಲವನ್ನು ಸಂಪೂರ್ಣ ಬಂದ್ ಮಾಡಿರುವುದನ್ನು ಗಮನಿಸಿದ ಖದೀಮರು
ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯದ ಮುಖ್ಯದ್ವಾರ ಮತ್ತು ಗರ್ಭಗುಡಿ ಬಾಗಿಲುಗಳ ಚಿಲಕಗಳನ್ನು ಕಿತ್ತು, ಬೀಗ ಮುರಿದು ದೇವರ 1 ದೊಡ್ಡ ಮಾಂಗಲ್ಯ, 5 ಸಣ್ಣ ಮಾಂಗಲ್ಯ ಸೇರಿ ಇನ್ನಿತರೆ ಒಡವೆ ದೋಚಿದ್ದಾರೆ. ಬೆಳಗ್ಗೆ ಎಂದಿನಂತೆ ದೇವಾಲಯದ ಪ್ರಧಾನ ಅರ್ಚಕ ಸತೀಶ್ ಪೂಜೆ ಸಲ್ಲಿಸಲು ತೆರಳಿದಾಗ ಕೃತ್ಯ ಬೆಳಕಿಗೆ ಬಂದಿದೆ. ನಂತರ ಗ್ರಾಮಸ್ಥರಿಗೆ ಮಾಹಿತಿ ನೀಡಿ, 112ಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ತೆರಳಿದ್ದಾರೆ. ನಂತರ ಗ್ರಾಮಾಂತರ ಠಾಣೆ ಪೊಲೀಸರು ದೇವಾಲಯಕ್ಕೆ ಭೇಟಿ ನೀಡಿ ಮಹಜರು ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅರ್ಚಕ ಸತೀಶ್, ಗ್ರಾಮಸ್ಥರಾದ ರಾಮಚಂದ್ರಪ್ಪ, ರಾಜಪ್ಪ, ಲಕ್ಷಿ$್ಮನಾರಾಯಣಗೌಡ ಮುಂತಾದವರು ದೂರಿನಲ್ಲಿ ಮನವಿ ಮಾಡಿದ್ದಾರೆ.