ಜಿಲ್ಲೆ

ಉಜಿರೆ ಸಂತ ಜಾರ್ಜ್ ದೇವಾಲಯಕ್ಕೆ ಭೇಟಿ

Avinash R

ಬೆಳ್ತಂಗಡಿ: ಕರ್ನಾಟಕ ಸೀರೋ ಮಲಬಾರ್ ಕೆಥೋಲಿಕ್ ಅಸೋಸಿಯೇಷನ್(ಕೆಎಸ್‌ಎಂಸಿಎ) ವತಿಯಿಂದ ಉಜಿರೆಯ ಸಂತ ಜಾರ್ಜ್ ದೇವಾಲಯಕ್ಕೆ ಭೇಟಿ ನೀಡಿ ಮುಂದಿನ ಕಾರ್ಯಚಟುವಟಿಕೆಯ ಬಗ್ಗೆ ಚರ್ಚೆ ನಡೆಸಲಾಯಿತು.

ಉಜಿರೆ ಕೆಎಸ್‌ಎಂಸಿ ಘಟಕ ವತಿಯಿಂದ ಈ ವಷರ್ ನಡೆಸಲ್ಪಟ್ಟ ಕಾರ್ಯಕ್ರಮಗಳ ವಿವರ ಪಡೆದು ಕೇಂದ್ರ ಸಮಿತಿ ಉತ್ತಮ ಅಭಿಪ್ರಾಯ ತಿಳಿಸಿ ಅಭಿನಂದಿಸಲಾಯಿತು.

ಸಮಾಜಕ್ಕೆ ಮತ್ತು ಸಮುದಾಯಕ್ಕೆ ಉತ್ತಮ ಸೇವೆಯನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಸಂಘಟನೆಯಾಗಿದೆ ಕೆ.ಎಸ್.ಎಂ.ಎ. ನಿಯೋಗದಲ್ಲಿ ಕೇಂದ್ರ ಸಮಿತಿಯ ನಿರ್ದೇಶಕ ಆದರ್ಶ್ ಪುದೀಯೇಡತ್, ಅಧ್ಯಕ್ಷ ಬಿಟ್ಟಿ ನೆಡುನಿಲಂ, ಜೈಸನ್ ಪಟ್ಟರಿಲ್, ಜೇಮ್ಸ್ ನೆಲ್ಲಿಕ್ಕುನ್ನೆಲ್, ಘಟಕದ ಅಧ್ಯಕ್ಷ ಜೋಬಿ ಮುಳವನ, ಲಿಜಿ ಜಾನ್ಸನ್, ಬಿಂದು, ಚೆರಿಯನ್ ವಾಲೂಕರನ್ ಮೊದಲಾದವರು ಉಪಸ್ಥಿತರಿದ್ದರು. ದೇವಾಲಯದ ಧರ್ಮಗುರು ಬಿಜು ಮ್ಯಾಥ್ಯೂ ಅಂಬಾಟ್ ಶುಭಹಾರೈಸಿದರು.