ಜಿಲ್ಲೆ

ಪ್ರಗತಿ ವಿದ್ಯಾಸಂಸ್ಥೆಗಳಿಂದ ವೃದ್ಧಾಶ್ರಮಕ್ಕೆ ಭೇಟಿ

ಕಡಬ: ತಾಲೂಕಿನ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನ ಮೇರಮಜಲ್ ಎಂಬಲ್ಲಿರುವ ಶ್ರೀಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮಕ್ಕೆ ಇತ್ತೀಚೆಗೆ ಭೇಟಿ ನೀಡಿದರು.

ಆಶ್ರಮದ ಸ್ಥಾಪಕ ಹರೀಶ್ ಪೆರ್ಗಡೆ ಕಾಂತಾಡಿಗುತ್ತು ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡರು. ವಿದ್ಯಾರ್ಥಿಗಳು ಭಜನೆ ಮತ್ತು ಹಾಡುಗಳ ಮೂಲಕ ವೃದ್ಧರನ್ನು ಮನರಂಜಿಸಿದರು.

ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಪ್ರವಾಸಕ್ಕೆ ಮಾತ್ರ ಆದ್ಯತೆ ಕೊಡದೆ ವೃದ್ಧರ ಕಷ್ಟಸುಖಗಳನ್ನು ಅರಿತು ಇಂತಹ ಸಂಸ್ಥೆಗಳೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ಎಲ್ಲ ಮಕ್ಕಳು ಮನೆಯಲ್ಲಿ ಪಾಲಕರನ್ನು ಪ್ರೀತಿಯಿಂದ ಕಾಣಬೇಕು. ಆ ಮೂಲಕ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು ಎಂದರು. ಅಕ್ಕಿ ತರಕಾರಿ ಹಣ್ಣು ಹಂಪಲುಗಳನ್ನು ಸಂಗ್ರಹಿಸಿ ವೃದ್ಧಾಶ್ರಮಕ್ಕೆ ನೀಡಲಾಯಿತು. ವೃದ್ಧಾಶ್ರಮಕ್ಕೆ ಧನ ಸಹಾಯ ಹಸ್ತಾಂತರಿಸಲಾಯಿತು.

ಶಾಲಾ ಟ್ರಸ್ಟಿ ವೃಂದಾ ಜೆ.ರೈ, ಸಹ ಆಡಳಿತ ಅಧಿಕಾರಿ ಹೇಮ ನಾಗೇಶ್ ರೈ, ಮುಖ್ಯಶಿಕ್ಷಕರಾದ ನಾರಾಯಣ್ ಭಟ್ ಮತ್ತು ವಿನಯ ವಿ ಶೆಟ್ಟಿ, ಗೈಡ್ ಕ್ಯಾಪ್ಟನ್ ವನಿತಾ, ಶಿಕ್ಷಕಿಯರಾದ ಸವಿತಾ ಕೆ, ಕವಿತಾ ವಿ.ರೈ, ಸುಷ್ಮಾ ಎಚ್.ರೈ, ಶಾಲಾ ಸಿಬ್ಬಂದಿ ಶ್ರೀಧರ ಅಗಳಿ ಉಪಸ್ಥಿತರಿದ್ದರು.