ಜಿಲ್ಲೆ

ಬಾಲಕಿಯರ ವಸತಿನಿಲಯಕ್ಕೆ ಭೇಟಿ

ಪ್ರಸಿನ್ ಕೆ.ಆರ್

ಹಾಸನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮ್ಮೀ ಚೌಧರಿ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಈ ನಿಲಯದಲ್ಲಿ 140 ರಿಂದ 200 ವಿದ್ಯಾರ್ಥಿನಿಯರಿದ್ದು, ವಿದ್ಯಾರ್ಥಿನಿಲಯದ ಕಟ್ಟಡ ಶೀತಗೊಂಡಿದೆ. ಆಹಾರ ಸರಿ ಇರುವುದಿಲ್ಲ. ಶೌಚಗೃಹ ವ್ಯವಸ್ಥೆ, ಸ್ವಚ್ಛತೆ ಇರುವುದಿಲ್ಲ. 4-5 ತಿಂಗಳಿನಿಂದ ಕಿಟ್‌ಗಳನ್ನು ನೀಡಿಲ್ಲ. ಸಿಸಿ ಕ್ಯಾಮರಾ ಕೊರತೆ ಇದೆ ಹಾಗೂ ಹೆಚ್ಚು ವಿದ್ಯಾರ್ಥಿಗಳು ಒಂದೇ ರೂಂನಲ್ಲಿ ಇರುವುದರಿಂದ ತೊಂದರೆಯಾಗುತ್ತಿದೆ ಎಂಬ ಅಹವಾಲುಗಳನ್ನು ಸ್ವೀಕರಿಸಿ ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.