ಜಿಲ್ಲೆ

ಸಿದ್ಧಾರೂಢ ಮಠಕ್ಕೆ ಭೇಟಿ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಶ್ರೀಸಿದ್ಧಾರೂಢ ಮಠಕ್ಕೆ ಬುಧವಾರ ಭೇಟಿ ನೀಡಿದ ಜುವಾರಿ ಫಾರ್ಮ ಹಬ್ ವ್ಯವಸ್ಥಾಪಕ ನಿರ್ದೇಶಕ ಮದನ ಮೋಹನ ಪಾಂಡೆ ಅವರು ಸಂಸ್ಥೆಯ ಅಭಿವೃದ್ಧಿಗಾಗಿ ಪೂಜೆ ಸಲ್ಲಿಸಿದರು.

ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.

ಮಠದ ನಿರ್ದೇಶಕ ಮತ್ತು ಸಂಸ್ಥೆಯ ದಕ್ಷಿಣ ವಲಯ ವ್ಯವಸ್ಥಾಪಕ ಕೆ.ಎಲ್. ಉಮಾಶಂಕರ ಹಾಗೂ ಪ್ರಾಂತೀಯ ವ್ಯವಸ್ಥಾಪಕ ಗಣೇಶ ಹೆಗಡೆ ಮತ್ತು ಯು. ಜಯಪ್ರಕಾಶ, ನಾಗೇಶ ಧಾಡಗೆ, ಪವನ ತಡಸ ಮತ್ತು ಸಿದ್ದಲಿಂಗಪ್ಪ ರಾಂಪುರೆ ಉಪಸ್ಥಿತರಿದ್ದರು.