ಕುಶಾಲನಗರದ ಪ್ರವಾಹ ಪೀಡಿತ ಸಾಯಿ ಬಡಾವಣೆಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿದರು. ಕಿರಣ್ ಗೋರಯ್ಯ, ಕೃಷ್ಣಪ್ರಸಾದ್, ವಿ.ಪಿ.ಶಶಿಧರ್, ಜೋಸೆಫ್ ವಿಕ್ಟರ್ ಸೊನ್ಸ್, ಪ್ರಮೋದ್ ಮುತ್ತಪ್ಪ ಇತರರು ಇದ್ದರು. 
ಜಿಲ್ಲೆ

ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಮಂತರ್ ಗೌಡ ಭೇಟಿ

ನಾಗೇಶ ಎಸ್

ಕುಶಾಲನಗರ: ವಿಧಾನಮಂಡಲ ಅಧಿವೇಶನ ಮುಗಿಸಿದ ಕೂಡಲೇ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಕುಶಾಲನಗರ ಪುರಸಭೆ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಹಾಗೂ ಸಂತ್ರಸ್ತರ ಜತೆಯಲ್ಲಿ ಚರ್ಚಿಸಿ, ಧೈರ್ಯ ತುಂಬಿದರು.

ಸಂತ್ರಸ್ತರಿಗೆ ಅತ್ಯಗತ್ಯವಾಗಿ ಬೇಕಾದ ಮೂಲ ಸೌಕರ್ಯ ಹಾಗೂ ತಾತ್ಕಾಲಿಕವಾಗಿ ವಾಸಿಸಲು ಬೇಕಾದ ವ್ಯವಸ್ಥೆ, ಆಹಾರ ಪದಾರ್ಥಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಡಿವೈಎಸ್ಪಿ ಗಂಗಾಧರಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೂಡ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಹಾಗೂ ಪ್ರಮುಖರು, ಪೋಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.