ಜಿಲ್ಲೆ

ಡಯಟ್ ಕೇಂದ್ರಕ್ಕೆ ಭೇಟಿ, ಪರಿಶೀಲನೆ

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ಒಳ ರೋಗಿಗಳಿಗೆ ನೀಡುವ ಆಹಾರ ಸಿದ್ಧಪಡಿಸುವ ಡಯಟ್ ಕೇಂದ್ರಕ್ಕೆ ಹಿಮ್ಸ್ ಆಡಳಿತ ಪರಿಷತ್ ಸದಸ್ಯ ರವೀಶ್ ಬಸವಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮವಾರ ಹಿಮ್ಸ್ ಡಯಟ್ ಕೇಂದ್ರಕ್ಕೆ ಭೇಟಿ ನೀಡಿದ ಅವರು, ರೋಗಿಗಳಿಗೆ ನೀಡುವ ಆಹಾರ ಸಿದ್ಧಪಡಿಸುವುದನ್ನು ಪರಿಶೀಲಿಸಿ ಅಲ್ಲಿಯೇ ಊಟ ಸೇವಿಸಿದರು. ಸ್ವಚ್ಛತೆಗೆ ಹಾಗೂ ಗುಣಮಟ್ಟದ ಆಹಾರ ನೀಡಲು ಆದ್ಯತೆ ನೀಡಬೇಕು ಹಾಗೂ ರೋಗಿಗಳಿಗೆ ನೀಡುವ ಹಣ್ಣು, ಮೊಟ್ಟೆ ಹಾಗೂ ಜ್ಯೂಸ್‌ಗಳು ಉತ್ತಮ ಗುಣಮಟ್ಟದಲ್ಲಿರಲಿ ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

ಗ್ಯಾರಂಟಿ ಸಮಿತಿ ಸದ್ಯಸ ದೇವಿಹಳ್ಳಿ ಅಶೋಕ್ ಇದ್ದರು.