ವಿಟ್ಲ: ಲೈಂಗಿಕ ದೌರ್ಜನ್ಯಗೊಳಗಾದ ವಿಟ್ಲ ಮುರುವದ ಸಂತ್ರಸ್ತ ಬಾಲಕಿ ಮನೆಗೆ ಡಿಎಚ್‌ಎಸ್, ಡಿವೈಎಫ್‌ಐ ನಾಯಕರ ನಿಯೋಗ ಭೇಟಿ ನೀಡಿ ಘಟನೆಗೆ ಸಂಬಂಽಸಿ ಹಲವು ಅಂಶಗಳ ಬಗ್ಗೆ ಚರ್ಚಿಸಿ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿತು.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿ ವಾರ ಕಳೆದರೂ ಆರೋಪಿ ಮಹೇಶ್ ಭಟ್ ನನ್ನು ಬಂಽಸಲು ಸಾಧ್ಯವಾಗದಿರುವ ಪೊಲೀಸ್ ಇಲಾಖೆಯ ಕ್ರಮ ಖಂಡನೀಯ. ಸದ್ಯ ಈ ಪ್ರಕರಣ ನಾಡಿನ ಗಮನ ಸೆಳೆದಿದ್ದು, ಹಲವು ಜನಪರ ಸಂಘಟನೆಗಳು ಘಟನೆಯನ್ನು ಖಂಡಿಸಿ ಆರೋಪಿಯ ಬಂಧನಕ್ಕೆ ಒತ್ತಾಯಿಸಿದರೂ ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಗಮನಹರಿಸದಿರುವುದು ಖೇದಕರ. ಸ್ಥಳೀಯ ಶಾಸಕರು ಈವರೆಗೂ ಕನಿಷ್ಟ ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ನೀಡದೆ ಕಾಳಜಿ ವಹಿಸದ ನಡೆ ನಿರಾಶೆ ಮೂಡಿಸಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ಡಿಎಚ್‌ಎಸ್, ಡಿವೈಎಫ್‌ಐ ಸಂಘಟನೆ ಮುಂದಿನ ಹಂತದ ಹೋರಾಟ ನಡೆಸುವ ತೀರ್ಮಾನ ಕೈಕೊಳ್ಳಲಿದ್ದು, ಆ ಮೂಲಕ ಕುಟುಂಬದ ಜತೆ ಗಟ್ಟಿಯಾಗಿ ನಿಲ್ಲಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ.
ದಲಿತ ಹಕ್ಕುಗಳ ಸಮಿತಿಯ ರಾಜ್ಯ ಮುಖಂಡೆ ಈಶ್ವರಿ ಪದ್ಮುಂಜ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಯಾದವ ಶೆಟ್ಟಿ, ಡಿಎಚ್‌ಎಸ್ ಜಿಲ್ಲಾ ಮುಖಂಡರಾದ ಕೃಷ್ಣಪ್ಪ ಕೊಣಾಜೆ, ಕೃಷ್ಣ ತಣ್ಣೀರುಬಾವಿ, ರಾಧಕೃಷ್ಣ ಬೊಂಡಂತಿಲ, ಸುನೀತಾ, ಮುರುವ ಪ್ರದೇಶದ ಮುಖಂಡರಾದ ಪುಷ್ಪರಾಜ್, ವಿನಯ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.