ಜಿಲ್ಲೆ

ಮಳೆಹಾನಿ ಪರಿಹಾರಕ್ಕೆ ಆಗ್ರಹ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರ ವಾರ್ಡ್ ಬಸವೇಶ್ವರ ಬಡಾವಣೆಯಲ್ಲಿ ಮಳೆಯಿಂದಾಗಿ ಕೊಟ್ಟಿಗೆ ಹಾಗೂ ಮನೆಗೆ ಹಾನಿಯಾದ ಸ್ಥಳಕ್ಕೆ ಸ್ಥಳೀಯ ಪಂಚಾಯಿತಿ ಸದಸ್ಯ ಕೆ.ಬಿ. ಶಂಶುದ್ಧೀನ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಸವೇಶ್ವರ ಬಡಾವಣೆ ನಿವಾಸಿ ಲೋಕೇಶ್ ಅವರ ಮನೆಯ ಕೊಟ್ಟಿಗೆ ಹಾಗೂ ಮನೆ ಮಳೆಯಿಂದಾಗಿ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿ ಕೂಡ ಭೇಟಿ ನೀಡಿದ್ದರು. ಈ ಸಂದರ್ಭ ಮಾತನಾಡಿದ ಕೆ.ಬಿ. ಶಂಶುದ್ಧೀನ್, ನಿರಂತರ ಮಳೆಯಿಂದ ದನದ ಕೊಟ್ಟಿಗೆ ಹಾನಿಯಾಗಿರುವುದರ ಜತೆಗೆ ಮನೆಯ ಗೋಡೆ ದೊಡ್ಡದಾಗಿ ಬಿರುಕು ಬಿಟ್ಡಿದೆ.

ತುಂಬಾ ಹಳೆಯ ಗೋಡೆಯಾದ್ದರಿಂದ ಮನೆಯಲ್ಲಿ ವಾಸಿಸದಂತೆ ಪಂಚಾಯಿತಿಯಿAದ ಸೂಚನೆ ನೀಡಲಾಗಿದೆ. ಕೊಟ್ಟಿಗೆ ಹಾಗೂ ಮನೆಯ ಗೋಡೆಗೆ ಹಾನಿಯಾಗಿರುವುದರಿಂದ ಕಂದಾಯ ಇಲಾಖೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಸ್ಥಳೀಯರು ಇದ್ದರು.