ಸುಬ್ರಹ್ಮಣ್ಯ: ಗುತ್ತಿಗಾರು ಗ್ರಾಮ ಪಂಚಾಯಿತಿ ಪರಿಶಿಷ್ಟ ಪಂಗಡದ ಸಭಾಭವನದಲ್ಲಿ ಅಮರ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರಿಗಾಗಿ ದೂರದೃಷ್ಟಿ ಅಭಿವೃದ್ಧಿ ಯೋಜನೆ ಕುರಿತು ತರಬೇತಿ ನಡೆಯಿತು.
ನಾಲ್ಕು ದಿನಗಳಂತೆ ಮೂರು ಹಂತಗಳಲ್ಲಿ ಒಟ್ಟು ಹನ್ನೆರಡು ದಿನಗಳ ಕಾಲ ತರಬೇತಿ ಆಯೋಜಿಸಲಾಗಿತ್ತು. ತರಬೇತಿಯಲ್ಲಿ ಭಾಗವಹಿಸಿದ ಮಹಿಳಾ ಸದಸ್ಯರು 2030ರ ವೇಳೆಗೆ ಗುತ್ತಿಗಾರು ಗ್ರಾಮ ಪಂಚಾಯಿತಿ ಹೊಂದಬೇಕಾದ ಸುಸ್ಥಿರ ಅಭಿವೃದ್ಧಿ ಸಾಧ್ಯತೆಗಳನ್ನು ಪಟ್ಟಿ ಮಾಡಿಕೊಂಡರು. ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮೌನೇಶ ವಿಶ್ವಕರ್ಮ ತರಬೇತುದಾರರಾಗಿದ್ದರು.
ಸಮಾರೋಪ ಸಮಾರಂಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಾ ಮೂಕಮಲೆ, ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕಿ ವಾಣಿಶ್ರೀ, ರಾಜ್ಯ ಸಂಪನ್ಮೂಲ ವ್ಯಕ್ತಿ ಶಿವರಾಮ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮೌನೇಶ ವಿಶ್ವಕರ್ಮ, ಪಿಡಿಒ ಧನಪತಿ, ಸುಳ್ಯ ತಾಲೂಕು ವ್ಯವಸ್ಥಾಪಕಿ ಶ್ವೇತಾ ರಾಜೇಶ್, ಕೌಶಲ್ಯಾಧಿಕಾರಿ ರೂಪಾ, ವಲಯ ವ್ಯವಸ್ಥಾಪಕಿ ಮೇರಿ ಎಸ್., ವಲಯ ಮೇಲ್ವಿಚಾರಕ ಅವಿನಾಶ್ ಡೆಲಾರಿಯೋ, ಕೃಷಿ ಅಧಿಕಾರಿ ಜೀವನ್, ಎಂಬಿಕೆ ಮಿತ್ರ ಕುಮಾರಿ ಮೊದಲಾದವರಿದ್ದರು.