ಜಿಲ್ಲೆ

ರಾಜ್ಯ ತಂಡಕ್ಕೆ ವಿಶ್ವೇಶ ಅಳಗುಂಡಗಿ

Dharwada - Santosh Vaidya

ಹುಬ್ಬಳ್ಳಿ: ಇಲ್ಲಿಯ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಕೋಚಿಂಗ್ ಸೆಂಟರ್​ನ ಪ್ರತಿಭೆ ವಿಶ್ವೇಶ ಅಳಗುಂಡಗಿ 14 ವಯೋಮಿತಿಯ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾನೆ.

ಗೋವಾದಲ್ಲಿ ಜ. 23ರಿಂದ ಫೆ. 4ರವರೆಗೆ ನಡೆಯಲಿರುವ 14 ವಯೋಮಿತಿಯ ದಕ್ಷಿಣ ವಲಯ ಮಟ್ಟದ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯ್ಕೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ವಿಶ್ವೇಶ ಸ್ಥಾನ ಪಡೆದಿದ್ದಾನೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಂತರ್ ವಲಯ ಕ್ರಿಕೆಟ್ ಪಂದ್ಯಾವಳಿಯ 4 ಪಂದ್ಯಗಳಲ್ಲಿ ವಿಶ್ವೇಶ 17 ವಿಕೆಟ್​ಗಳನ್ನು ಕಬಳಿಸಿ ಗಮನ ಸೆಳೆದಿದ್ದ.