ಜಿಲ್ಲೆ

ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

ರಾಘವೇಂದ್ರಗೌಡ ಭೀ ಪಾಟೀಲ್

ಸವದತ್ತಿ: ವಿಶ್ವಕರ್ಮ ಸಮುದಾಯ ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮರು ಯಾವುದೇ ಜಾತಿ, ಧರ್ಮದ ತಾರತಮ್ಯವಿಲ್ಲದೇ ಎಲ್ಲರನ್ನೂ ಸಮಾನರಾಗಿ ಕಂಡಿದ್ದಾರೆ. ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ತಲುಪಿಸಿ ಸಮುದಾಯದ ಏಳಿಗೆಗಾಗಿ ಶ್ರಮಿಸಲಾಗುವುದು. ಜಾಗ ಇದ್ದಲ್ಲಿ ಸಮುದಾಯ ಭವನ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ವಿಶ್ವಕರ್ಮ ಸಮುದಾಯದ ತಾಲೂಕಾಧ್ಯಕ್ಷ ಸಿದ್ದಯ್ಯ ಒಡೆಯರ ಮಾತನಾಡಿ, ಸೆ.22 ರಿಂದ ಜಾತಿಗಣತಿ ಆರಂಭಗೊಳ್ಳಲಿದ್ದು, ಜಾತಿಗಣತಿ ಅರ್ಜಿಯಲ್ಲಿ ರಾಷ್ಟ್ರೀಯತೆ ಕಾಲಂನಲ್ಲಿ ಭಾರತೀಯ, ಧರ್ಮದ ಕಾಲಂನಲ್ಲಿ ಹಿಂದು ಹಾಗೂ ಜಾತಿ ಕಾಲಂನಲ್ಲಿ ವಿಶ್ವಕರ್ಮ ಎಂದು ನಮೂದಿಸಬೇಕು ಎಂದರು.

ತಹಸೀಲ್ದಾರ್ ಎಂ.ಎನ್.ಹೆಗ್ಗನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಶಶಿರಾಜ ವನಕಿ, ಅರುಣ ಸುಳ್ಳದ, ಅಶೋಕ ಸೋನಾರ, ಶಂಕರ ಪತ್ತಾರ, ರಾಜು ಪತ್ತಾರ, ಅಶೋಕ ಬಡಿಗೇರ, ವಿನಾಯಕ ಪತ್ತಾರ, ಮೌನೇಶ ಮಾಯಾಚಾರಿ, ವಿನಾಯಕ ಚೊಳಚಗುಡ್ಡ, ಸುನೀಲ ಸುಳ್ಳದ ಇತರರಿದ್ದರು.