ಕೆರೂರ ಪಪಂ ಸಭಾ ಭವನದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. 
ಜಿಲ್ಲೆ

ವಿಶ್ವಕರ್ಮ ವಿಶ್ವದ ಪ್ರಥಮ ಇಂಜಿನಿಯರ್

ದತ್ತಾತ್ರೇಯ ಪಿ ಕುಲಕರ್ಣಿ

ಕೆರೂರ: ವಿಶ್ವದ ಮೊದಲ ಅಭಿಯಂತರ ಭಗವಾನ ವಿಶ್ವಕರ್ಮರು ಅವರು ಇಂದಿನ ಅಭಿಯಂತರರಿಗೆ ಮಾದರಿ ಎಂದು ಶ್ರೀಧರ ಆಚಾರ್ಯ ವಿಶ್ವಬ್ರಾಹ್ಮಣ ಪಪಂ ಸಭಾ ಭವನದಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ಪೂಜೆ ಸಲ್ಲಿಸಿ ಯುವಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ನಿರ್ಮಲಾ ಮದಿ, ಉಪಸ್ಥಿತರಿದ್ದರು, ಪಪಂ ಸದಸ್ಯ ಸಿಂದಲಿಂಗಪ್ಪ ಕೊಣ್ಣೂರ. ಸೇರಿದಂತೆ ಪ್ರಮುಖರಾದ ಸದಾನಂದ ಮದಿ, ಮಂಜು ಪತ್ತಾರ, ಪುಂಡಲೀಕ ಪತ್ತಾರ, ಶ್ರೀನಿವಾಸ ವಿಶ್ವಬ್ರಾಹ್ಮಣ, ಈಶ್ವರ ಪತ್ತಾರ, ರಮೇಶ ಬೇಲಾಳ, ಬಸಪ್ಪ ಬಡಿಗೇರ, ಗಣೇಶ ರಾಯ್ಕರ, ದಾಮೋದರ ಬೇಲಾಳ, ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಸಿಬ್ಬಂದಿಗಳಾದ ಅಶ್ವಥ ರಂಗನಗೌಡ್ರ, ನವೀನ ಮಹಾರಾಜನವರ, ಬಸವರಾಜ ಕಟ್ಟಿಮನಿ, ಸಂಗಮೇಶ ಮಾದರ, ಕಪಿಲ ಪ್ಯಾಟಿ, ವಿಶ್ವಕರ್ಮ ಸಮಾಜದವರು ಉಪಸ್ಥಿತರಿದ್ದರು.