ಜಿಲ್ಲೆ

ವಿಶ್ವಕರ್ಮ ಸಮಾಜದ ನೋಂದಣಿ ಅಭಿಯಾನ: ನಗರದಲ್ಲಿ ಚಾಲನೆ

ಮಂಡ್ಯ: ವಿಶ್ವಕರ್ಮ ಸಮಾಜದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಜಿಲ್ಲಾ ಮಹಿಳಾ ನಿರ್ದೇಶಕಿ ಬಿ.ಕೆ.ರಾಧಾ ರಮೇಶ್ ಆರಂಭಿಸಿದರು.

ಇಲ್ಲಿನ ಅಶೋಕನಗರದಲ್ಲಿ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ವಿಶ್ವಕರ್ಮ ಸಮಾಜದ ನೋಂದಣಿಗೆ ಚಾಲನೆ ನೀಡಲಾಗಿದ್ದು, ನಮ್ಮ ಸಮಾಜದ ಎಲ್ಲರೂ ಅಗತ್ಯ ಮಾಹಿತಿ ದಾಖಲಿಸಿ. ಸದಸ್ಯರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ಉತ್ಸುಕರಾಗಿದ್ದಾರೆ. ಸದಸ್ಯತ್ವ ಅಭಿಯಾನವನ್ನು ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ನಡೆಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಮುಂದಾಗಿದ್ದು, ನಮ್ಮ ಸಮಾಜ ಕೂಡ ಇದನ್ನು ಬೆಂಬಲಿಸುತ್ತದೆ. ಹಾಗಾಗಿ ವಿಶ್ವಕರ್ಮ ಮಠಾಧೀಶರ ಒಕ್ಕೂಟದ ಗೌರವಾಧ್ಯಕ್ಷ ಶಿವಸುಜ್ಞಾನ ತೀರ್ಥ ಸ್ವಾಮೀಜಿ ತಿಳಿಸಿರುವಂತೆ ನಮ್ಮ ಸಮಾಜದ ಪಂಚಕಸುಬುದಾರರು ವಿಶ್ವಕರ್ಮ ಎಂದು, ಪೌರೋಹಿತ್ಯ ಮಾಡುವವರು ವಿಶ್ವಬ್ರಾಹ್ಮಣರೆಂದು ನಮೂದಿಸುವಂತೆ ಹೇಳಿದ್ದಾರೆ. ಅದರಂತೆ ನಾವುಗಳೆಲ್ಲ ಸಮೀಕ್ಷೆಯಲ್ಲಿ ಹಾಗೆಯೇ ನಮೂದಿಸಬೇಕೆಂದು ಸಲಹೆ ನೀಡಿದರು.

ಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಂ.ಬಿ.ರಮೇಶ್, ಎಂ.ಎನ್.ನಂದಿನಿ, ಕೆ.ನಿವೇದಿತಾ, ಜಯಶೀಲಾ, ರಜನಿಕಾಂತ್ ಕಾಳಾಚಾರ್, ಕನ್ಯಮ್ಮ, ಜೆ.ಸೋಮಸುಂದರ್, ಎನ್.ಭಾವನಾ ಉಪಸ್ಥಿತರಿದ್ದರು.