ಜಿಲ್ಲೆ

ಕಾನತ್ತಡ್ಕದಲ್ಲಿ ವಿಶ್ವಕರ್ಮ ಪೂಜೆ

Mangaluru - Nishantha Narayana


ವಿಟ್ಲ: ಕಾನತ್ತಡ್ಕದ ವಿಶ್ವಕರ್ಮ ಸಮುದಾಯ ಭವನದಲ್ಲಿ ಕಾನತ್ತಡ್ಕ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ವತಿಯಿಂದ ವಿಶ್ವಕರ್ಮ ಪೂಜೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸಂತೋಷ್ ಪುರೋಹಿತ್ ದಿಡುಪೆ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ಎರುಂಬು ವಹಿಸಿದ್ದರು.
ಗೌರವಾಧ್ಯಕ್ಷ ಸುಂದರ ಆಚಾರ್ಯ ನೆಗಳಗುಳಿ ವಿಟ್ಲ, ಕೂಡುವಳಿಕೆ ಮೊಕ್ತೇಸರ ಜಗನ್ನಾಥ ಆಚಾರ್ಯ ಕೂಟೇಲು, ಉಪಾಧ್ಯಕ್ಷ ಶ್ರೀಧರ ಆಚಾರ್ಯ ಮಂಡ್ಯೂರು, ಜೊತೆ ಕಾರ್ಯದರ್ಶಿ ಹರೀಶ್ ಆಚಾರ್ಯ ಗುಂಡೂರು ಉಪಸ್ಥಿತರಿದ್ದರು.
ಹರಿಪ್ರಸಾದ್ ಆಚಾರ್ಯ ಕೇಪುಕಟ್ಟೆ ಪ್ರಾರ್ಥಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ಆಚಾರ್ಯ ಎರುಂಬು ಸ್ವಾಗತಿಸಿದರು. ಕೋಶಾಽಕಾರಿ ಪರಮೇಶ್ವರ ಆಚಾರ್ಯ ಮಂಕುಡೆನೆಡ್ಯಾಳ ಕಾರ್ಯಕ್ರಮ ನಿರೂಪಿಸಿದರು.