ಬಸವನಬಾಗೇವಾಡಿ ಪಟ್ಟಣದ ವಿಶ್ವಕರ್ಮ ಬಾಂಧವರು ವಿಶ್ವಕರ್ಮರ ಭಾವಚಿತ್ರದ ಶೋಭಾಯಾತ್ರೆಗೆ ಚಾಲನೆ ನೀಡಿದರು. ಸುಬ್ಬರಾಯ ಪತ್ತಾರ, ಕೆ.ಬಿ.ಕಡೆಮನಿ, ವೀರಭದ್ರ ಪತ್ತಾರ, ಬಸವರಾಜ ಯಂಬತ್ತನಾಳ, ಚನ್ನಪ್ಪ ಪತ್ತಾರ ಇತರರಿದ್ದರು. 
ಜಿಲ್ಲೆ

ಬಸವನಬಾಗೇವಾಡಿಯಲ್ಲಿ ವಿಶ್ವಕರ್ಮ ಜಯಂತಿ

ಬಸವನಬಾಗೇವಾಡಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ವಿವಿಧೆಡೆ ವಿಶ್ವಕರ್ಮ ಜಯಂತಿಯನ್ನು ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಪಟ್ಟಣದಲ್ಲಿರುವ ಕಾಳಿಕಾದೇವಿ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕಾಳಿಕಾದೇವಿಗೆ ವಿಶೇಷ ಪೂಜೆ ನೆರವೇರಿಸಿ ವಿಶ್ವಕರ್ಮ ಧ್ವಜಾರೋಹಣ ಹಾಗೂ ಪೂಜೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ನಂತರ ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಮಾತನಾಡಿ, ವಿಶ್ವಕರ್ಮ ಸಮಾಜದ ಬಾಂಧವರು ಬಸವಣ್ಣನವರ ಕಾಯಕದ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಂಚಲೋಹ ಸೇರಿ ಇನ್ನಿತರ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡು ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕಾಳಿಕಾದೇವಿ ದೇವಸ್ಥಾನಕ್ಕೆ ಆಗಮಿಸಿದ ಸಮಾಜ ಬಂಧುಗಳು ಅಲಂಕೃತ ವಾಹನದಲ್ಲಿ ವಿಶ್ವಕರ್ಮ ದೇವರ ಭಾವಚಿತ್ರ ಇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಸಿದರು.

ಸಮಾಜದ ಧರ್ಮಗುರುಗಳಾದ ಮಹೇಂದ್ರ ಸ್ವಾಮಿಗಳು, ಕಾಳಿಕಾದೇವಿ ದೇವಾಲಯದ ಅರ್ಚಕ ಸುಬ್ಬರಾಯ ಪತ್ತಾರ, ವಿಶ್ವಕರ್ಮ ತಾಲೂಕಾಧ್ಯಕ್ಷ ಕೆ.ಬಿ.ಕಡೆಮನಿ, ಸಮಾಜದ ಹಿರಿಯರಾದ ವೀರಭದ್ರ ಪತ್ತಾರ, ಬಸವರಾಜ ಯಂಬತ್ತನಾಳ, ಚನ್ನಪ್ಪ ಪತ್ತಾರ, ಎಂ.ಎಸ್.ಪತ್ತಾರ, ಜಗನ್ನಾಥ ಪತ್ತಾರ, ರಾಜೇಂದ್ರ ಪತ್ತಾರ, ಅಶೋಕ ಪತ್ತಾರ, ಕರುಣಾಕರ ಪತ್ತಾರ, ಕೃಷ್ಣಾ ಬಡಿಗೇರ, ಶ್ರೀಶೈಲ ಪತ್ತಾರ, ಜಗನಾಥ ಪತ್ತಾರ, ಮುತ್ತು ಪತ್ತಾರ, ಸುಭಾಸ ಪತ್ತಾರ, ಬಸವರಾಜ ಬಡಿಗೇರ, ಮಂಜುನಾಥ ಬಡಿಗೇರ , ಕೆ.ಗಂಗಾಧರ, ದಾನೇಶ ಬಡಿಗೇರ, ಪ್ರಸಾದ ಬಡಿಗೇರ, ಪೂರ್ಣಿಮ ಚೌಧರಿ, ರೂಪಾ ಪತ್ತಾರ, ದ್ರಾಕ್ಷಾಯಿನಿ ಪತ್ತಾರ, ನಿಲಮ್ಮ ಪತ್ತಾರ, ಮಾನಕ್ಕ ಪತ್ತಾರ ಇತರರಿದ್ದರು.