ಕುರುಗೋಡಿನಲ್ಲಿ ವಿಶ್ವಕರ್ಮ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಶಾಂತಾನಾಯಕ್ ಸಂಘದ ಖಜಾಂಚಿ ಗುರು, ಪ್ರಮುಖರಾದ ಕುಮಾರಸ್ವಾಮಿ, ಬಿ.ವೀರೇಶ, ವೆಂಕಟೇಶ್, ಚಂದ್ರಶೇಖರ್ ಇತರರಿದ್ದರು. 
ಜಿಲ್ಲೆ

ವಿಶ್ವಕರ್ಮ ಸಮುದಾಯ ಇತರರಿಗೆ ಮಾದರಿ

Gangavati - Desk - Veeresh S Ullagaddi

ಕುರುಗೋಡು: ಅತ್ಯುತ್ತಮ ಶಿಲ್ಪಕಲೆ ವಿನ್ಯಾಸ ಮಾಡುವುದರಲ್ಲಿ ವಿಶ್ವಕರ್ಮರು ಮಹತ್ವ ಪಾತ್ರವಹಿಸಿದ್ದಾರೆ ಎಂದು ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಹೇಳಿದರು.


ಪಟ್ಟಣದ ತಹಸಿಲ್ ಕಚೇರಿಯಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಪರಿಶ್ರಮದ ಜೀವನ ಸಾಗಿಸುವ ವಿಶ್ವಕರ್ಮ ಸಮುದಾಯಕ್ಕೆ ಸಮಾಜದಲ್ಲಿ ವಿಶೇಷ ಗೌರವವಿದೆ. ಎಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.


ಮೆರವಣಿಗೆ: ಕೆಳಗಳ ಪೇಟೆಯ ಕಾಳಮ್ಮದೇವಿ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಾದನಹಟ್ಟಿ ರಸ್ತೆಯಲ್ಲಿರುವ ವಿಶ್ವಕರ್ಮ ದೇವಸ್ಥಾನದ ಆವರಣದಲ್ಲಿ ಸಮಾರೂಪಗೊಂಡಿತು.


ವಿಶ್ವಕರ್ಮ ಗುರುಪೀಠದ ಶಿವಶಂಕರ ಮಹಾಸ್ವಾಮಿ, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಬಿಇಒ ಸಿಂದಲಿಂಗ ಮೂರ್ತಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವೀರನಗೌಡ, ಶಾಂತಾನಾಯಕ್ ಸಂಘದ ಪದಾಧಿಕಾರಿಗಳಾದ ಗೌರಾವಾಧ್ಯಕ್ಷ ಮೌನೇಶ ಆಚಾರಿ, ಅಧ್ಯಕ್ಷ ಬಿ. ಪ್ರಕಾಶ್ ಆಚಾರಿ, ಉಪಾಧ್ಯಕ್ಷ ಬಿ.ಶಶಿಧರ, ಪ್ರ.ಕಾರ್ಯದರ್ಶಿ ಎ.ಪ್ರವೀಣ ಇತರರಿದ್ದರು.