ಅರಕೇರಾ ತಾಲೂಕಿನ ಜಾಗೀರ ಜಾಡಲದಿನ್ನಿ ನೀಲಾಂಬಿಕೆ ಬಸವ ಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ 68ನೇ ಬಸವ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮ ನಡೆಯಿತು. ಆಶ್ರಮದ ಅಧ್ಯಕ್ಷ ವೀರಭದ್ರ ಸ್ವಾಮೀಜಿ, ಪ್ರಮುಖರಾದ ಅಮರಗುಂಡಪ್ಪ ಹೂಗಾರ, ಅಮರಪ್ಪ ಗೌಡ ಶಾಖಾಪುರ, ಬೆಟ್ಟಪ್ಪ ಕಸ್ತೂರಿ ಅತ್ತನೂರು, ಗಂಗಾಧರಯ್ಯ ಸ್ವಾಮಿ ಇದ್ದರು. 
ಜಿಲ್ಲೆ

ವಿಶ್ವಗುರು ಬಸವಣ್ಣ ಮಹಾಶರಣ

ರುದ್ರಪ್ಪ ವಾಲಿ

ಅರಕೇರಾ: ವಿಶ್ವಗುರು ಬಸವಣ್ಣ ಒಂದೇ ಸಮಾಜಕ್ಕೆ ಸೀಮಿತವಾದವರಲ್ಲ. ಮನುಕುಲದ ಒಳಿತಿಗಾಗಿ, ಉದ್ಧಾರಕ್ಕಾಗಿ ಜನಿಸಿದ ಮಹಾಶರಣ ಎಂದು ನೀಲಾಂಬಿಕೆ ಬಸವ ಯೋಗಾಶ್ರಮದ ಅಧ್ಯಕ್ಷ ಶ್ರೀ ವೀರಭದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮದ ನೀಲಾಂಬಿಕೆ ಬಸವ ಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ 68ನೇ ಬಸವ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಹುಟ್ಟಿದ ಮನುಷ್ಯ ಒಂದು ದಿವಸ ಹೋಗಲೇಬೇಕು. ಯಾವ ಸ್ವಾಮಿಯಾದರೆ ಏನು? ಯಾವ ಗುರು ಆದರೇನು? ಯಾವ ಜಗದ್ಗುರುಗಳು ಆದರೇನು? ಬದುಕಿರುವವರೆಗೆ ಒಳ್ಳೆ ಕೆಲಸ ಮಾಡಿ ಹೋಗಬೇಕು ಎಂಬುದು ಬಸವಣ್ಣನವರ ವಚನಗಳಲ್ಲಿ ಅಡಗಿರುವ ಮಹತ್ವ ಎಂದರು.

ಶರಣು ವಿಶ್ವ ವಚನ ಫೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ ಬೂದಿನಾಳ ಮಾತನಾಡಿ, ನಿಷ್ಟುರ, ನಿರ್ಭೀತ ವಚನಗಳಿಂದ ಸಮಾಜದಲ್ಲಿ ಅಸಮಾನತೆ, ಮೂಢನಂಬಿಕೆಗಳ ವಿರುದ್ಧ ಹನ್ನೆರಡನೇಯ ಶತಮಾನದಲ್ಲಿಯೇ ಶರಣರು ದ್ವನಿ ಎತ್ತಿದ್ದಾರೆ. ವಚನ ಸಾಹಿತ್ಯವನ್ನು ಇಡೀ ನಾಡಿನಾದ್ಯಂತ ಬೆಳೆಸಿದ್ದಾರೆ ಎಂದರು.

ಪ್ರಮುಖರಾದ ಅಮರಗುಂಡಪ್ಪ ಹೂಗಾರ, ಅಮರಪ್ಪ ಗೌಡ ಶಾಖಾಪುರ, ಬೆಟ್ಟಪ್ಪ ಕಸ್ತೂರಿ ಅತ್ತನೂರು, ಗಂಗಾಧರಯ್ಯ ಸ್ವಾಮಿ, ಅಮರೇಶ ಸ್ವಾಮಿ, ಮಸ್ತಾನ್ ಸಾಬ ಸಿರವಾರ, ಅಕ್ಕಮಹಾದೇವಿ, ಮಲ್ಲಪ್ಪ, ಸಾಬಣ್ಣ ಇತರರಿದ್ದರು.